ಬಳ್ಳಾರಿ: ‘ಆಧುನಿಕ ಜಗತ್ತು ಸೃಷ್ಟಿಸಿದ ತಂತ್ರಜ್ಞಾನವು ಅನುಕೂಲದ ಜೊತೆಗೆ ಹಲವು ಬಗೆಯ ಆತಂಕಗಳನ್ನು ಒಡ್ಡಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಮತ್ತು ‘ಕನ್ನಡಿ’ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಜಯರಾಮ ‘ವಿದ್ಯಾರ್ಥಿಗಳು ಸಕಾರಾತ್ಮಕ ಆಲೋಚನೆ, ಶಿಸ್ತು, ಸಂಯಮದ ನಡವಳಿಕೆಯಿಂದ ಕಾಲೇಜಿಗೆ ಕೀರ್ತಿ ತರಬೇಕು. ಮಾನವೀಯ ಮೌಲ್ಯ, ಆದರ್ಶ ಗುಣಗಳನ್ನು, ಸೌಹಾರ್ದ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು’ ಎಂದರು.

ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ‘ಕಾಲೇಜು ವಿದ್ಯಾರ್ಥಿಗಳನ್ನು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುತ್ತ ಅವರ ಭವಿಷ್ಯಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಿದೆ ಎಂದರು

ಈ ವೇಳೆ ನೂತನವಾಗಿ ನಿರ್ಮಿಸಿದ ಗಣಕಯಂತ್ರ ಪ್ರಯೋಗಾಲಯ ಉದ್ಘಾಟಿಸಲಾಯಿತು. ಪ್ರಾಂಶುಪಾಲರಾದ ಪ್ರಹ್ಲಾದ್ ಚೌದ್ರಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರೇಷ್ಮಾ, ಕಲಾವಿದ ಜ್ಞಾನೇಶ್ವರ್, ಪ್ರಾಧ್ಯಾಪಕರಾದ ಹೊನ್ನೂರಾಲಿ, ಮಂಜುನಾಥ್, ದೊಡ್ಡಮನಿ ಹನುಮಂತ ನಾಯಕ, ಶೋಭಾರಾಣಿ, ಕನ್ಯಾಕುಮಾರಿ ಉಡಗಿ, ಜ್ಯೋತಿ ಅಣ್ಣಾರಾವ್, ದೊಡ್ಡ ಬಸವರಾಜ್, ರಾಮಸ್ವಾಮಿ, ದುರುಗಪ್ಪ ಟಿ., ಕಚೇರಿ ವ್ಯವಸ್ಥಾಪಕರಾದ ಯುವರಾಜ ನಾಯಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-25-1493940492

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.