ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು (ವಿಎಸ್ಕೆಯು) ಪ್ರಸಕ್ತ ಸಾಲಿನಿಂದ ಪದವಿ ಕೋರ್ಸ್ಗಳನ್ನು ಆರಂಭಿಸಲು ನಿರ್ಧರಿಸಿದೆ. ತನ್ನ ಮುಖ್ಯ ಆವರಣ ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ನೇರವಾಗಿ ಪದವಿ (ಯುಜಿ) ಕೋರ್ಸ್ ಗಳನ್ನು ಆರಂಭಿಸಲಿದೆ.

ಮುಖ್ಯವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಫುಡ್ ಟೆಕ್ನಾಲಜಿ, ಡಾಟಾ ಸೈನ್ಸ್ನಂಥ ಬೇಡಿಕೆ ಯುಳ್ಳ ವಿಷಯಗಳನ್ನು ಬಡ ವಿದ್ಯಾರ್ಥಿಗಳಿಗೂ ಕೈಗೆಟುಕುವ ದರದಲ್ಲಿ ನೀಡಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.

ವಿವರ: ಬಳ್ಳಾರಿಯ ‘ಜ್ಞಾನಸಾಗರ’ದಲ್ಲಿ ವಾಣಿಜ್ಯ (ಬಿ.ಕಾಂ ಫಿನ್ ಟೆಕ್, ಅಕೌಂಟಿಂಗ್ ಮತ್ತು ಫೈನಾನ್ಸ್), ನಿರ್ವಹಣಾಶಾಸ್ತ್ರ (ಬಿ.ಬಿ.ಎ. ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್, ಲಾಜಸ್ಟಿಕ್ ಅಂಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್), ಸೂಕ್ಷ್ಮ ಜೀವಶಾಸ್ತ (ಬಿ.ಎಸ್ಸಿ ಫುಡ್ ಟೆಕ್ನಾಲಜಿ), ಗಣಕ ವಿಜ್ಞಾನ (ಬಿ.ಸಿ.ಎ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಾಟಾ ಸೈನ್ಸ್), ಅರ್ಥಶಾಸ್ತ್ರ ಅಧ್ಯಯನ (ಬಿ.ಎ. ಎಕನಾಮಿಕ್ಸ್ ಆ್ಯಂಡ್ ಡೇಟಾ ಸೈನ್ಸ್) ವಿಭಾಗಗಳನ್ನು ಆರಂಭಿಸಲಾಗುತ್ತಿದೆ.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ದಲ್ಲಿ ವಾಣಿಜ್ಯ (ಫಿನ್ ಟೆಕ್), ಅನ್ವಯಿಕ ವಿಜ್ಞಾನ ( ಅರ್ಥ್ ಸೈನ್ಸ್), ಗಣಕ ವಿಜ್ಞಾನ ಅಧ್ಯಯನ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬೋಧಿಸಲಾಗುತ್ತದೆ.

ಹರಪನಹಳ್ಳಿ ಸ್ನಾತಕೋತ್ತರ ಕೇಂದ್ರ ದಲ್ಲಿ ವಾಣಿಜ್ಯ (ಫಿನ್ ಟೆಕ್), ಗಣಕ ವಿಜ್ಞಾನ (ಬಿ.ಸಿ.ಎ. ಆರ್ಟಿಫಿಶಿಯಲ್ ಇಂಟೆಲಿ ಜೆನ್ಸ್), ಅರ್ಥಶಾಸ್ತ್ರ (ಎಕನಾಮಿಕ್ಸ್ ಅಂಡ್ ಡೇಟಾ ಸೈನ್ಸ್), ನಿರ್ವಹಣಾಶಾಸ್ತ್ರ (ಲಾಜಸ್ಟಿಕ್ ಅಂಡ್ ಸಪ್ಲೈ ಚೈನ್ ಮ್ಯಾನೇ ಜ್ಮೆಂಟ್) ವಿಭಾಗಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 30 ಕೊನೆಯ ದಿನ. ಮಾಹಿತಿಗೆ ವೆಬ್ಸೈಟ್ ವಿಳಾಸ: www.vskub.ac.in.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-25-2011865742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.