ಬಂಟ್ವಾಳ: ರಾಜ್ಯದಲ್ಲಿ 1995ರಿಂದ ಅನುದಾನಿತ ಶಾಲೆಗಳಿಗೆ ಸರ್ಕಾರವು ಕನ್ನಡ ಶಿಕ್ಷರನ್ನು ನೇಮಿಸಿಲ್ಲ. ಎಲ್ಲ ಭಾಷೆಗಳಿಗೆ ಮೂಲವಾಗಿರುವ ಸಂಸ್ಕೃತ ಭಾಷೆಯ ಕಡೆಗಣನೆಯೂ ಸಲ್ಲದು ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಹೇಳಿದರು.

ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಶನಿವಾರ ಸಮಾರೋಪಗೊಂಡ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ ಅಧ್ಯಕ್ಷತೆ ವಹಿಸಿದ್ದರು.

ಮುಖಂಡ ಬಿ.ರಮಾನಾಥ ರೈ ಮಾತನಾಡಿ, ನಗರ ಪ್ರದೇಶಗಳಿಂದ ಶಿಕ್ಷಕರು ಗ್ರಾಮೀಣ ಭಾಗಗಳಿಗೆ ವರ್ಗಾವಣೆಗೊಳ್ಳಲು ಬಯಸುವುದಿಲ್ಲ. ಇದಕ್ಕೆ ಶಿಕ್ಷಕರನ್ನು ದೂಷಿಸುವುದೂ ಸರಿಯಲ್ಲ. ಕನ್ನಡ ಶಾಲೆ ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಹೊಣೆಗಾರರು ಎಂಬುದು ಕೂಡ ಅಷ್ಟೇ ಸತ್ಯ. ರಷ್ಯಾದಲ್ಲಿ ಲೆನಿನ್ ಕ್ರಾಂತಿ ಬಳಿಕ ಎಲ್ಲರಿಗೂ ಅಕ್ಷರ ಜ್ಞಾನ ಸಿಕ್ಕಿದೆ. ಇಲ್ಲಿ ಕನ್ನಡ ಬಲವರ್ಧನೆಗೆ ಅಗತ್ಯವಾಗಿರುವ ಸಂಸ್ಕೃತ ಕಲಿಯಲು ನಮಗೆ ಅವಕಾಶ ಸಿಕ್ಕಿಲ್ಲ ಎಂದು ಅವರು ಹೇಳಿದರು.

ಸ್ವಾಗತ ಸಮಿತಿ ಅಧ್ಯಕ್ಷ ಬಿ.ರಘುನಾಥ ಸೋಮಯಾಜಿ ಮಾತನಾಡಿ, ಕನ್ನಡ ನಮ್ಮೆಲ್ಲರ ಜೀವನಾಡಿಯಾಗಿದ್ದು, ನಮ್ಮನ್ನು ಮಾನವತಾವಾದಿಯನ್ನಾಗಿಸುತ್ತದೆ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಜಿಲ್ಲಾ ರೋಟರಿ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್, ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ವಕೀಲ ಜಯರಾಮ ರೈ ಮಾತನಾಡಿದರು.

ಸಮಾಜ ಸೇವಕ ರವಿಶಂಕರ್ ಶೆಟ್ಟಿ ಬಡಾಜೆ, ವಿನೋದ್ ಶೆಣೈ, ಜಗನ್ನಾಥ ಚೌಟ ಬದಿಗುಡ್ಡೆ, ಜಗನ್ನಾಥ ಬಂಗೇರ ನಿರ್ಮಾಲ್ ಅವರಿಗೆ ಸಾಧಕ ಪ್ರಶಸ್ತಿ, ಪದ್ಮನಾಭ ಭಟ್ ಎಕ್ಕಾರ್, ಸದಾನಂದ ನಾರಾವಿ, ಕೆ.ರಾಜರಾಮ ಶರ್ಮ, ಕೇಶವ ಕೆ.ಕೊಯಿಲ, ಡಾ.ಮುರಳೀಧರ ವೈ.ಕೆ., ಅಬ್ದುಲ್ ಲತೀಫ್ ಗುರುಪುರ, ದೇವಿಪ್ರಸಾದ್ ಬೆಳ್ತಂಗಡಿ, ಲೂವಿಝ ಕುಟಿನ್ಹೋ, ಕೆ.ಟಿ.ವಿಶ್ವನಾಥ್, ಡಾ.ಕೆ.ಎ.ಸಿದ್ದಿಕ್ ಆಡ್ಡೂರು, ರವೀಶ್ ಪಡುಮಲೆ, ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಎ.ಗೋಪಾಲ ಅಂಚನ್, ಎಚ್.ಕೆ.ನಯನಾಡು ಅವರಿಗೆ ಕನ್ನಡ ಸಿರಿ ಪ್ರಶಸ್ತಿ, ಡಾ.ಎಸ್.ಆರ್.ನರಹರಿ ಕಾಸರಗೋಡು, ಕಟೀಲು ಕ್ಷೇತ್ರದ ಯಕ್ಷಗಾನ ಮಂಡಳಿ ಸಂಸ್ಥೆಯನ್ನು ಅಭಿನಂದಿಸಲಾಯಿತು.

ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಗಳಾದ ರಾಜೇಶ್ವರಿ ಎಂ., ಎಚ್.ವಿನಯ ಆಚಾರ್ಯ, ಬಿ.ಐತಪ್ಪ ನಾಯ್ಕ್, ತಾಲ್ಲೂಕು ಪದಾಧಿಕಾರಿಗಳಾದ ವಿಶ್ವನಾಥ ಬಂಟ್ವಾಳ, ಕೆ.ಸೇಸಪ್ಪ ರೈ ಕಡಬ, ವೇಣುಗೋಪಾಲ್ ಶೆಟ್ಟಿ ಮೂಡುಬಿದಿರೆ, ಮಂಜುನಾಥ್ ಎಸ್.ರೇವಣಕರ್ ಮಂಗಳೂರು, ಮಿಥುನ್ ಉಡುಪ ಮೂಲ್ಕಿ, ರಾಮದಾಸ್ ಬಂಟ್ವಾಳ, ಸುಭಾಶ್ಚಂದ್ರ ಜೈನ್, ದೇವಪ್ಪ ಕುಲಾಲ್, ಮೋಹನ್ ಶೆಟ್ಟಿ ಪಂಜಿಕಲ್ಲು ಭಾಗವಹಿಸಿದ್ದರು.

ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಎಂ.ಪಿ.ಶ್ರೀನಾಥ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಅಮ್ಮುಂಜೆ ವಂದಿಸಿದರು. ಪ್ರಾಂಶುಪಾಲ ವಿ.ಸು.ಭಟ್ ಮತ್ತು ಆಶಾ ಮಯ್ಯ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-29-1445806100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.