ಬಸವಕಲ್ಯಾಣ: ‘ಪ್ರತಿಭಾವಂತರು ಪ್ರಾಮಾಣಿಕತೆ ತೋರಬೇಕು. ಸಚ್ಚ್ಯಾರಿತ್ರ್ಯವಂತರಾಗಬೇಕು’ ಎಂದು ಬಿಇಟಿ ಎಂಜಿನಿಯರಿಂಗ್ ಕಾಲೇಜಿನ ಖಜಾಂಚಿ ಲಿಂಗರಾಜ ಪಾಟೀಲ ಅಟ್ಟೂರ್ ಅಭಿಪ್ರಾಯಪಟ್ಟರು.

ನಗರದ ಬಿಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆದ ವಾರ್ಷಿಕೋತ್ಸವ ‘ಅನ್ವೇಷಣ’ದಲ್ಲಿ ಅವರು ಮಾತನಾಡಿದರು.

‘ಅನೇಕರು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಆಯ್ಕೆ ಆಗುತ್ತಾರೆ. ಆದರೆ ಸ್ವಾರ್ಥ ಸಾಧಿಸಲು ಪ್ರಯತ್ನಿಸುವುದರಿಂದ ಜನರ ಭರವಸೆ ಕಳೆದುಕೊಳ್ಳುತ್ತಾರೆ. ಮಾಡಿ ಮಾಡಿ ಕೆಟ್ಟರೋ ಮನವಿಲ್ಲದನಕ್ಕ ಎನ್ನುವಂತೆ ಯಾವುದಕ್ಕೂ ಕಾಟಾಚಾರ ಇರಬಾರದು. ಬಸವಣ್ಣನವರು ಅರಿವೆ ಗುರು ಎಂದಿದ್ದಾರೆ. ಅದೇ ನಮ್ಮ ಸಂಸ್ಥೆಯ ಲೋಗೋ ಕೆಳಗಿನ ಒಕ್ಕಣೆ ಆಗಿದೆ. ಉತ್ತಮ ಉದ್ದೇಶದಿಂದ ಬಸವರಾಜ ಪಾಟೀಲ ಅಟ್ಟೂರ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ’ ಎಂದರು.

ಡಿವೈಎಸ್ಪಿ ಮಡೋಳಪ್ಪ ಪಿ.ಎಸ್. ಮಾತನಾಡಿ, ‘ಇದು ಉತ್ತಮ ಸಂಸ್ಥೆಯಾಗಿದೆ. ನಾನೂ ಇದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದೇನೆ. ಒಳ್ಳೆಯದನ್ನು ಬಯಸಬೇಕು. ಉತ್ತಮ ವ್ಯಕ್ತಿತ್ವ ಹೊಂದಬೇಕು’ ಎಂದರು.

ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಮಾತನಾಡಿ, ‘ಗ್ರಾಮೀಣ ಭಾಗದವರ ಅನುಕೂಲತೆಗಾಗಿ ಈ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲಾಗಿದೆ. ಬಸವಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂದೇಶದ ಪಾಲನೆ ಆಗಲಿ’ ಎಂದರು.

ಭಾಲ್ಕಿ ಭೀಮಣ್ಣ ಖಂಡ್ರೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಉದಯಕುಮಾರ ಕಲ್ಯಾಣಿ, ಕಾಲೇಜಿನ ಪ್ರಾಚಾರ್ಯ ಅಶೋಕಕುಮಾರ ವಣಗೇರಿ, ವಿದ್ಯಾಸಾಗರ ಮೂಲಗೆ, ಅನಿಲಕುಮಾರ ಪಾಟೀಲ ಮಾತನಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-33-930732921

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.