ಬಸವಕಲ್ಯಾಣ: ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸೋಮವಾರ ಶಾಲಾ ಆರಂಭೋತ್ಸವ ಸಂಭ್ರಮದಿಂದ ನಡೆಸಲಾಯಿತು. ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.

ಖಾನಾಪುರ (ಕೆ) ಗ್ರಾಮದಲ್ಲಿ ಎತ್ತಿನ ಬಂಡಿಯನ್ನು ಸಿಂಗರಿಸಿ ಮೆರವಣಿಗೆಯಲ್ಲಿ ಕೊಂಡೊಯ್ದು ಮಕ್ಕಳನ್ನು ಸ್ವಾಗತಿಸಲಾಯಿತು. ಬಳಿಕ ಎಸ್.ಡಿ.ಎಂ.ಸಿ ಅಧ್ಯಕ್ಷ ಮಲ್ಲಪ್ಪ ಸಂಗೋಳಗೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಿವಾನ ಕಾಕನಾಳೆ ಮತ್ತು ರಾಜಣ್ಣ ಬೆಳಮಗೆ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮುಖ್ಯಶಿಕ್ಷಕ ದತ್ತಾತ್ರೇಯ ಜೋಶಿ, ಸಾವಿತ್ರಿ ಪಾಟೀಲ, ಸರೂಬಾಯಿ ದೊಡ್ಡಿ, ಸುನಿತಾ ರಾಚಣ್ಣ, ರಾಮ ಮಿರ್ಜಾಪುರೆ, ಬಾಲಾಜಿ ಸಂಗೋಳಗೆ, ಗಣಪತಿ ಕೊಳಸೂರೆ, ಅಣ್ಣೆಪ್ಪ ಸಂಗೋಳಗೆ, ರಾಮ ಪಾಟೀಲ, ಗಂಗಮ್ಮ ನೀಲಕಂಠೆ ಪಾಲ್ಗೊಂಡಿದ್ದರು.

ಗೌರ ತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಆರಂಭೋತ್ಸವದಲ್ಲಿ ಅಕ್ಕ ಪಡೆಯ ಪೊಲೀಸ್ ಆದ ಮಂಜುಳಾ ಮತ್ತು ಲಕ್ಷ್ಮಿಯವರು ಮಹಿಳಾ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಉಚಿತ ಸಮವಸ್ತ್ರ ಪಠ್ಯ ಪುಸ್ತಕ ಸಹ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಹ್ಲಾದ್ ರಾಠೋಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಗೌತಮ ಕಾಂಬಳೆ, ಮುಖ್ಯಶಿಕ್ಷಕ ವೀರೇಂದ್ರರೆಡ್ಡಿ, ಶಿಕ್ಷಕರಾದ ಸುಮಿತ್ರಾ ರಾಠೋಡ, ಸೂರ್ಯಕಾಂತ ಟೀಕೆಕರ್, ರವಿತಾ ಠಾಕೂರ, ಸರೋಜನಿ ದೊಡ್ಡಿ, ಸ್ನೇಹಲತಾ ಮೇತ್ರೆ ಪಾಲ್ಗೊಂಡಿದ್ದರು.

ಕಿಟ್ಟಾ ಸರ್ಕಾರಿ ಶಾಲೆಯಲ್ಲಿ ನಡೆದ ಶಾಲಾ ಆರಂಭೋತ್ಸವದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕರ ಫುಲೆ, ಮುಖಂಡ ಮಾರುತಿ ಫುಲೆ, ಮುಖ್ಯಶಿಕ್ಷಕ ನಿಂಗಪ್ಪ ಮತ್ತಿತರರಉ ಪಾಲ್ಗೊಂಡಿದ್ದರು. ಶಾಲಾ ಆವರಣವನ್ನು ವಿಶೇಷವಾಗಿ ಸಿಂಗರಿಸಿ ಮಕ್ಕಳನ್ನು ಸ್ವಾಗತಿಸಿಕೊಳ್ಳಲಾಯಿತು. ಬಾಳೆಹಣ್ಣು, ಮೊಟ್ಟೆ, ಸಿಹಿ ವಿತರಿಸಲಾಯಿತು.

ಕಮಲನಗರ : ಬೇಸಿಗೆ ರಜೆ ದಿನಗಳನ್ನು ಖುಷಿಯಿಂದ ಕಳೆದು ಮತ್ತೆ ಶಾಲೆಗೆ ಹೆಜ್ಜೆ ಹಾಕಿದ ಮಕ್ಕಳಿಗೆ ತಾಲ್ಲೂಕಿನಾದ್ಯಂತ ಶಾಲೆಗಳಲ್ಲಿ ಶಿಕ್ಷಕರು ಹೂಮಳೆಗೈದು ಸ್ವಾಗತಿಸಿದರು.

ಶಾಲಾ ಆರಂಭೋತ್ಸವದ ನಿಮಿತ್ತ ಎಲ್ಲ ಶಾಲೆಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಬಹಳಷ್ಟು ಶಾಲೆಗಳಲ್ಲಿ ಮಾವಿನ ತೋರಣ ಹಾಕಿ ರಂಗೋಲಿ ಬರೆದು ಮಕ್ಕಳಿಗೆ ಪುಷ್ಪವೃಷ್ಟಿಗರೆದು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಮಕ್ಕಳಿಗೆ ಸಿಹಿ ವಿತರಿಸಿ ಶಿಕ್ಷಕರು ತರಗತಿ ಆರಂಭಿಸಿದರು.

ಕೋಟಗ್ಯಾಳ ಸರ್ಕಾರಿ ಶಾಲೆ : ತಾಲ್ಲೂಕಿನ ಕೋಟಗ್ಯಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 2026-27 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವದ ನಿಮಿತ್ತ ಶಿಕ್ಷಕರು ಮಕ್ಕಳಿಗೆ ಗುಲಾಬಿ ಹೂ ನೀಡಿ ಸಿಹಿ ತಿನಿಸಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಪ್ರಕಾಶ ಮಹಾಜನ, ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಬಿರಾದಾರ, ಶಿಕ್ಷಕರಾದ ನಾಗೇಶ ಸಂಗಮೆ, ರಾಜಕುಮಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-33-2088873083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.