ಬಸವಕಲ್ಯಾಣ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಸಂಬಂಧ ಕೆಲವರು ನ್ಯಾಯಾಲಯದಿಂದ ತಂದಿದ್ದ ತಡೆಯಾಜ್ಞೆ ತೆರವುಗೊಂಡಿದ್ದರಿಂದ ಚುನಾವಣಾ ಪ್ರಕ್ರಿಯೆ ಏಪ್ರಿಲ್ 28 ಕ್ಕೆ ಪುನಃ ಪ್ರಾರಂಭಗೊಂಡಿತು. ಆದ್ದರಿಂದ ಸಂಘದ ಬಸವಕಲ್ಯಾಣ ಘಟಕದ ಎಲ್ಲ 15 ಸದಸ್ಯ ಸ್ಥಾನಗಳಿಗೆ ಮೊದಲೇ ಅವಿರೋಧ ಆಯ್ಕೆ ನಡೆದಿದ್ದರೂ ಈಗ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಆಗಿರುವ ಚುನಾವಣಾ ಅಧಿಕಾರಿ ಪ್ರಭಾಕರ ಕಳಮಾಸೆ ತಿಳಿಸಿದ್ದಾರೆ.

ಶನಿವಾರ ಬಿಇಒ ಸಿದ್ದವೀರಯ್ಯ ರುದನೂರು ಅವರ ನೇತೃತ್ವದಲ್ಲಿ ನೂತನ ಸದಸ್ಯರಿಗೆ ಆಯ್ಕೆಯ ಪ್ರಮಾಣಪತ್ರಗಳನ್ನು ಸಹ ವಿತರಿಸಲಾಗಿದೆ. ಸಾಮಾನ್ಯ ಪುರುಷ ಸ್ಥಾನಗಳಿಗೆ ಶ್ರೀನಿವಾಸರೆಡ್ಡಿ, ಸಂತೋಷಕುಮಾರ ಅಕ್ಕಣ್ಣ, ಅಲ್ಲಾವುದ್ದೀನ್ ಪಟೇಲ್, ಚನ್ನವೀರ ಶಿಂಧೆ, ಶರಣಬಸಪ್ಪ ಬಿರಾದಾರ, ಅನಿಲಕುಮಾರ ಶಾಸ್ತ್ರೀ, ಮಹೇಶ ಗಂದಗೆ, ಮಾಧವ ಪಾಟೀಲ, ವೇದಪ್ರಕಾಶ ಜಗತಾಪ, ದೇವೇಂದ್ರ ಪಟ್ನೆ ಯಾಕೂಬಪುರ ಅವರು ಆಯ್ಕೆಗೊಂಡಿದ್ದಾರೆ.

ಮಹಿಳಾ ಸ್ಥಾನಗಳಿಗೆ ಭಾಗ್ಯಜ್ಯೋತಿ ಸೋನಕಾಂಬಳೆ ರಾಜೋಳಾ, ನುಸರತ್ ಬೀ ಬಸವಕಲ್ಯಾಣ, ಮೀನಾಕ್ಷಿ ಜಾಧವ ಖಾನಾಪುರ (ಕೆ), ರಾಜೇಶ್ವರಿ ರಾಜೋಳೆ ತ್ರಿಪುರಾಂತ, ವಿಜಯಲಕ್ಷ್ಮಿ ಬಿರಾದಾರ ಮಂಠಾಳ ಅವರು ಆಯ್ಕೆಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-33-1710265213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.