ಬಸವಕಲ್ಯಾಣ: ‘ಬೆಟ್ಟಿಂಗ್, ಆನ್ಲೈನ್ ಗೇಮ್ ಬಗ್ಗೆ ಆಸಕ್ತಿ ತೋರುತ್ತಿರುವ ಇಂದಿನ ಯುವಕರು ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಶಿಕ್ಷಕರು ಅವರಿಗೆ ಶಿಸ್ತು ಮತ್ತು ಸಂಯಮ ಕಲಿಸಬೇಕಾದ ಅಗತ್ಯವಿದೆ’ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.

ನಗರದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದಿಂದ ಸೋಮವಾರ ನಡೆದ ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಾವೇಶ, ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಮಾತನಾಡಿ, ‘ನೌಕರರ ಎಷ್ಟೇ ಸಂಘಟನೆಗಳು ಇದ್ದರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದರು.

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ತಾಳೆ ಮಾತನಾಡಿ, ‘ಸಂಘಟನೆಯನ್ನು ಬಲಗೊಳಿಸಿ ರಚನಾತ್ಮಕ ಕಾರ್ಯ ಕೈಗೊಳ್ಳಬೇಕು’ ಎಂದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನವೀರ ಜಮಾದಾರ ಮಾತನಾಡಿ, ‘ಸಂಘಟನೆಗಳ ಪದಾಧಿಕಾರಿಗಳು ಮೊದಲು ಕರ್ತವ್ಯನಿಷ್ಠರಾಗಬೇಕು. ವಿವಿಧ ಸಂಘಟನೆಯವರು ಪರಸ್ಪರರಿಗೆ ಸಹಕಾರ ನೀಡಿ ಸೌಲಭ್ಯ ಪಡೆದುಕೊಳ್ಳಬೇಕು’ ಎಂದರು.

ತಹಶೀಲ್ದಾರ್ ಶಿವಾನಂದ ಮೇತ್ರೆ, ಸೂರ್ಯಕಾಂತ ಟೀಕೆಕರ್, ತುಕಾರಾಮ ರೊಡ್ಡೆ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರುಗಳಾದ ದಿಲೀಪಗೀರ್ ಗೋಸಾವಿ, ಗೋವಿಂದ ಚಾಮಾಲೆ, ಜಗನ್ನಾಥ ಬೆಂಬಳಗೆ ಅವರಿಗೆ ‘ಶೈಕ್ಷಣಿಕ ಸೇವಾ ಸಾಧಕ’ ಪ್ರಶಸ್ತಿ ನೀಡಲಾಯಿತು. 18 ಶಿಕ್ಷಕರಿಗೆ ವಿದ್ಯಾರತ್ನ ಪ್ರಶಸ್ತಿ, ಮೂವರು ಶಿಕ್ಷಕರಿಗೆ ಸೇವಾ ಭೂಷಣ ಪ್ರಶಸ್ತಿ, ಮೂವರಿಗೆ ಬೋಧಕೇತರ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಮುಖರಾದ ಕ್ಷೇಮಲಿಂಗ ಬೆಳಮಗೆ, ವಿಜಯಲಕ್ಷ್ಮಿ ಪಂಚಾಳ, ಶಾಮ ಕಾರಬಾರಿ, ಬಾಲಾಜಿ ಪಾಟೀಲ, ನಾಗರಾಜ ಲಾಡೆ, ಸೂರ್ಯಕಾಂತ ಪಾಟೀಲ, ಶಿವರಾಜ ಕಪಲಾಪುರೆ, ಧನಶ್ರೀ ಪುರ್ಮೆ, ಗಣಪತಿ ಧಮ್ಮೂರೆ, ಗೌರಮ್ಮ ವಾಡೇಕರ್, ನುಸ್ರತ್ ನನ್ನೆಸಾಬ್, ವಿನೋದಕುಮಾರ ಪವಾರ, ಪ್ರಭುಶೆಟ್ಟಿ ಬಿರಾದಾರ, ವಿಜಯಕುಮಾರ ರಾಯಪಳ್ಳಿ, ಸಂತೋಷ ಮೋರೆ, ಚಂದ್ರಕಾಂತ ಪವಾಡಶೆಟ್ಟಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-33-1295051316

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.