ಬಸವನಬಾಗೇವಾಡಿ: ನಮ್ಮದು ‘ಲೋಕಲ್ ರೂಟ್ಸ್, ಗ್ಲೋಬಲ್ ರೋಡ್ಸ್’ ಎನ್ನುವಂತೆ ನಮ್ಮ ಮಕ್ಕಳ ಬೇರುಗಳ ಹಿಡಿತವೆಲ್ಲಾ ಒಳ್ಳೆಯ ಮೌಲ್ಯಗಳು, ಸಂಸ್ಕೃತಿ, ಸಂಪ್ರದಾಯ ಹಾಗೂ ಈ ಮಣ್ಣಿನ ಗುಣಗಳದ್ದಾಗಿರಬೇಕು. ಆದರೆ ಬೆಳೆಯುವ ಎತ್ತರ, ಗಾತ್ರ ಮಾತ್ರ ಇಡೀ ಜಗತ್ತಿಗೆ ಪಸರಿಸಬೇಕು. ಅಂತಹ ಶಕ್ತಿ ನಮ್ಮ ನಾಡು, ನಮ್ಮ ಮಣ್ಣಿನಲ್ಲಿದೆ’ ಎಂದು ಹಿರಿಯ ಕೆಎಎಸ್ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

ಯರನಾಳ ವಿರಕ್ತಮಠದಲ್ಲಿ ಈಚೆಗೆ ಜರುಗಿದ ಪಂಪಾಪತಿ ಶಿವಯೋಗಿಗಳ ಜಾತ್ರೋತ್ಸವ ಉದ್ಘಾಟನೆ ಹಾಗೂ ಜ್ಞಾನದಾಸೋಹಿ ಸಂಗನಬಸವ ಶಿವಯೋಗಿಗಳ 125ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ, ಉತ್ತಮ ಸಂಪ್ರದಾಯ, ಸಮಾಜಸೇವೆ ಹೇಳಿಕೊಟ್ಟರೆ ಅವರು ಅದ್ವಿತೀಯರಾಗಲು ಸಾಧ್ಯ’ ಎಂದರು.

ಬಾಗಲಕೋಟೆಯ ಡಾ.ರಾಜೇಂದ್ರ ಪಾಟೀಲ, ವಿಜಯಪುರದ ಡಾ.ನಿತೀನ್ ಟಿಕಾರೆ, ಬಸವನಬಾಗೇವಾಡಿ ಡಾ. ನಂದಕುಮಾರ ವಜೀರಕರ, ಡಾ.ಹಿತೇಂದ್ರ ನಾಯಕ್, ಡಾ.ವಿಜಯ್ ಅಸ್ಕಿ, ಡಾ.ಜೋನಾ ಕಟವಟಿ, ಡಾ.ಸೋಮನಾಥ ಮರಗೂರ ವೈದ್ಯ ದಂಪತಿಗಳನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಲಾಯಿತು. ಉದ್ಯಮಿ ಬಸವರಾಜ ಬಿಜ್ಜರಗಿ ಅವರನ್ನು ಸನ್ಮಾನಿಸಲಾಯಿತು.

ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹಿರಿಯ ಕೆಎಎಸ್ ಅಧಿಕಾರಿ ಅನುರಾಧ ಸಿ. ವಸ್ತ್ರದ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಯಡಳ್ಳಿ, ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ವಿಶ್ವಬಂಧು ಬಸವ ಸಮಿತಿ ಅಧ್ಯಕ್ಷ ಡಾ.ಅಮರೇಶ ಮಿಣಜಗಿ ಇದ್ದರು. ಶಿಕ್ಷಕಿ ಗಿರಿಜಾ ಪಾಟೀಲ, ಪುಷ್ಪಾ ಗುಳೇದ ಹಾಗೂ ಶರಣಬಸು ಹಳಮನಿ ಕಾರ್ಯಕ್ರಮ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-26-25558399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.