ಬಸವನಬಾಗೇವಾಡಿ: ಪಿ.ಲಂಕೇಶ್ ಅವರು ಕನ್ನಡ ಸಾರಸ್ವತ ಲೋಕದಲ್ಲಿ, ಕವಿ ಬಳಗದಲ್ಲಿ ಅಜರಾಮರವಾಗಿ ಉಳಿಯುವಂತ ಹೆಸರಾಗಿದೆ ಎಂದು ಸಾಹಿತಿ ಸಿದ್ದರಾಮ ಬಿರಾದಾರ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ, ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಪಿ. ಲಂಕೇಶ್ ಅವರ ಬದುಕು ಬರಹ ಮತ್ತು ಪತ್ರಿಕೋದ್ಯಮ’ ಕುರಿತು ರಾಜ್ಯಮಟ್ಟದ ಒಂದು ದಿನದ ವಿಶೇಷ ಕಾರ್ಯಾಗಾರದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿ, ಪಿ.ಲಂಕೇಶ್ ಅವರು ಕನ್ನಡದ ಮೇರು ಸಾಹಿತಿ, ಪತ್ರಿಕೋದ್ಯಮಿಯಾಗಿದ್ದರು. ಇವರ ಸಂಪಾದಕತ್ವದ ಲಂಕೇಶ್ ಪತ್ರಿಕೆ ಸಾರ್ವತ್ರಿಕವಾಗಿ ಸಮಾಜವನ್ನು ತಿದ್ದುವ ಹಾಗೂ ಸಮಾಜಕ್ಕೆ ಬೆಳಕಾಗಿ ಮೂಡಿ ಬಂದ ಅಮೂಲ್ಯ ಪತ್ರಿಕೆಯಾಗಿದೆ ಎಂದರು.

ವಿಜಯಪುರದ ಆದರ್ಶ ಶಿಕ್ಷಕರ ವೇದಿಕೆ ಅಧ್ಯಕ್ಷ ಉಮೇಶ ಕೌಲಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ಬಿ.ಎಂ.ಸಾಲವಾಡಗಿ, ಪ್ರಾಚಾರ್ಯ ಡಾ.ಎ.ವಿ.ಸೂರ್ಯವಂಶಿ ಮಾತನಾಡಿದರು.

ಈ ವೇಳೆ ಸಾಹಿತಿ ಶಂಕರ ಬೈಚಬಾಳ, ಐಕ್ಯೂಎಸಿ ಯ ಸಂಯೋಜಕ ಪ್ರೊ.ಸಿ.ಪಿ.ಧಡೇಕರ, ಡಾ.ಎಸ್.ಎಂ.ಬಿಜಾಪುರ, ಎಸ್.ಕೆ.ಚಿಕ್ಕನರ್ತಿ, ಎಂ.ಕೆ.ಯಾದವ, ಎಸ್.ಜೆ.ಸೂರ್ಯವಂಶಿ, ಪಿ.ಎಸ್.ಹೊರಕೇರಿ, ಆರ್.ಎಂ.ಮುಜಾವರ, ಪಿ.ಎಂ.ಗೂಳನ್ನವರ, ಎ.ವಿ.ಪಾಟೀಲ, ಸಿ.ಬಿ.ಬಿರಾದಾರ ಹಾಗೂ ಎಲ್ಲ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-26-50117385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.