ಬೆಳಗಾವಿ: ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಅಭೂತಪೂರ್ವ ವೇಗದಲ್ಲಿ ವಿಕಸನಗೊಳ್ಳುತ್ತ ಸಾಗಿದೆ. ಅದಕ್ಕೆ ಅನುಗುಣವಾಗಿ ವಿಶ್ವವಿದ್ಯಾನಿಲಯಗಳು ಮತ್ತು ಕೈಗಾರಿಕೆಗಳು ಸಾಂಪ್ರದಾಯಿಕ ಕಲಿಕೆಯಿಂದ ಹೊರಬಂದು; ಭವಿಷ್ಯಕ್ಕೆ ಕೌಶಲಯುಕ್ತ ಮಾನವ ಸಂಪನ್ಮೂಲ ಸಿದ್ಧಪಡಿಸಬೇಕು’ ಎಂದು ಕೆಎಲ್ಎಸ್ ಜಿಐಟಿ ಪ್ರಾಂಶುಪಾಲ ಪ್ರೊ.ವಿಜಯ್ ಆಠವಲೆ ವಿವರಿಸಿದರು.

ಕರ್ನಾಟಕ ಕಾನೂನು ಸೊಸೈಟಿಯ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಎಂಜಿನಿಯರಿಂಗ್ 2.0: ಎಐ ರಿಡಿಫೈನಿಂಗ್ ಕೆರಿಯರ್ಸ್’ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಎಲ್ಎಸ್ ಜಿಐಟಿ ಈ ಶೈಕ್ಷಣಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದೆ. ಜಾಗತಿಕ ಉದ್ಯಮದ ದಿಗ್ಗಜರನ್ನು ನೇರವಾಗಿ ತನ್ನ ಕ್ಯಾಂಪಸ್ಗೆ ಕರೆಸುವ ಮೂಲಕ ತರಗತಿಯ ಕಲಿಕೆ ಮತ್ತು ನೈಜ ಪ್ರಪಂಚದ ಜ್ಞಾನ ನೀಡಲಾಗುತ್ತಿದೆ. ಇದರಿಂದ ಕಲಿಕೆ ಹಾಗೂ ಪ್ರಾಯೋಗಿಕ ಬದುಕಿನ ನಡುವಿನ ಅಂತರ ಕಡಿಮೆ ಆಗುತ್ತಿದೆ’ ಎಂದರು.

ವಿವಿಧ ಎಂಜಿನಿಯರಿಂಗ್ ಕ್ಷೇತ್ರಗಳ ಪರಿಣತರಾದ ಸೂರ್ಯಕಾಂತ ಮುತ್ನಾಳ, ವೆಂಕಟೇಶ್ ರಾವ್, ಕೀರ್ತಿಪ್ರಸಾದ್ ಕುಲಕರ್ಣಿ, ಸೌರಭ್ ಕೌಶಿಕ್, ಪ್ರಿಯಾಂಕಾ ನಾಯಕ್, ಅಮಿತ್ ಘಾಡ್ಗೆ, ಅವಿನಾಶ್ ಪಾಟೀಲ, ಎಚ್.ಎಸ್. ಪಾಟೀಲ ಮುಂತಾದ ವಿಶ್ವಪ್ರಸಿದ್ಧ ಕಂಪನಿಗಳ ಪ್ರತಿನಿಧಿಗಳು ಮಾರ್ಗದರ್ಶನ ಮಾಡಿದರು. ಕೆಎಲ್ಎಸ್ ಅಧ್ಯಕ್ಷ ಪ್ರದೀಪ್ ಎಸ್. ಸಾವ್ಕರ್ ಅಧ್ಯಕ್ಷೀಯ ಭಾಷಣ ಮಾಡಿದರು. ಉಪಾಧ್ಯಕ್ಷ ಆರ್.ಬಿ. ಭಂಡಾರೆ, ಡಿ.ವಿ. ಕುಲಕರ್ಣಿ, ಎ.ಕೆ. ಟಗಾರೆ, ವಿ.ಎಂ. ದೇಶಪಾಂಡೆ, ಎಸ್.ವಿ. ಗಣಾಚಾರಿ, ರಾಜೇಂದ್ರ ಬೆಳಗಾಂವ್ಕರ್ ಹಾಗೂ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-21-925735417

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.