ಬೆಳಗಾವಿ: ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು ಇಂದಿಗೂ ಅವುಗಳ ಪ್ರಸ್ತುತತೆ ತುಂಬಾ ಮಹತ್ವದ್ದಾಗಿದೆ. ಅವರು ಕೇವಲ ದಲಿತರ ನಾಯಕರಲ್ಲ; ಇಡೀ ಭಾರತದ ಸಾಮಾಜಿಕ, ಜಕೀಯ, ಆರ್ಥಿಕ ಮತ್ತು ಪ್ರಜಾಪ್ರಭುತ್ವದ ಚಿಂತಕ’ ಎಂದು ಸಂಗಮೇಶ ಐಟಿಐ ಕಾಲೇಜು ಉಪ ಪ್ರಾಚಾರ್ಯ ಎನ್.ಎಫ್ ಮಲಕಣ್ಣವರ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ, ಸಂಗಮೇಶ ಐಟಿಐ ಕಾಲೇಜು ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆ-18ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮಹಿಳಾ ಸಬಲೀಕರಣಕ್ಕಾಗಿ ಹಿಂದೂ ಕೋಡ್ ಬಿಲ್ ನೀಡಿದ ಅವರು ಮಹಿಳೆಯರಿಗೆ ಆಸ್ತಿ ಹಕ್ಕು, ವಿಚ್ಛೇದನ ಹಕ್ಕುಗಳನ್ನು ನೀಡಲು ಹೋರಾಡಿದರು. ನಾನು ಸಮಾಜದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯುತ್ತೇನೆ ಎಂಬ ಮಾತು ಲಿಂಗ ಸಮಾನತೆ ಚಳವಳಿಗೆ ದಾರಿದೀಪವಾಗಿದೆ’ ಎಂದರು.

ಪ್ರಾಚಾರ್ಯ ಬಸವರಾಜ ಸದಲಗೆ ಅಧ್ಯಕ್ಷೀಯ ಭಾಷಣ ಮಾಡಿದರು. ಜಿಲ್ಲಾ ಸಂಚಾಲಕ ಶಿವರಾಜ ಅರಳಿ, ಅಯ್ಯಪ್ಪ ಹುನಗುಂ, ವಿದ್ಯಾರ್ಥಿ ಮಂಜುನಾಥ ಹಗೆದಾಳ, ಮುತ್ತು ನಾಯಕ,ಯಲ್ಲೇಶ ಬೆಳಗಾವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-21-169685206

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.