ಬೆಳಗಾವಿ: ‘ಪ್ರಜಾಸತಾತ್ಮಕತೆಯಿಂದ ಇಂದಿನ ಪೀಳಿಗೆಗೆ ಅಕ್ಷರ ಭಾಗ್ಯ ಸಿಕ್ಕಿದೆ. ಪ್ರಜಾಸತಾತ್ಮಕತೆ ಎಂಬುದು ಕೇವಲ ಭಾಷಣದ ಭಾಗವಾಗದೆ, ವರ್ತಮಾನದ ವಿದ್ಯಮಾನವಾಗಬೇಕು’ ಎಂದು ವಿಮರ್ಶಕ ನಟರಾಜ್ ಬೂದಾಳು ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಬೆಂಗಳೂರಿನ ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಬುದ್ಧನನ್ನು ಕೇವಲ ಧರ್ಮ ಸಂಸ್ಥಾಪಕನಾಗಿ ನೋಡಬಾರದು. ಬದಲಿಗೆ, ಈ ಲೋಕ ಹೇಗಿದೆಯೋ, ಹಾಗೆಯೇ ನೋಡಬೇಕು ಎಂದು ತೋರಿಸಿಕೊಟ್ಟ ವಿಜ್ಞಾನಿಯಾಗಿ ಕಾಣಬೇಕು’ ಎಂದರು.

‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳನ್ನು ಜಯಂತಿಗಳ ವೇಳೆ ಭಾಷಣಕ್ಕೆ ಸೀಮಿತಗೊಳಿಸಬಾರದು. ಅವರ ಬದುಕಿನ ತಾತ್ವಿಕತೆಯನ್ನು ನಮ್ಮ ಬದುಕಿನುದ್ದಕ್ಕೂ ಅನುಸರಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳೇ ನಮ್ಮ ಜೀವನಕ್ಕೆ ಆಧಾರ. ಮೂವರು ಮಹನೀಯರು ಸಾಮಾಜಿಕ ವಿಜ್ಞಾನಿ ಮತ್ತು ಸಾಮಾಜಿಕ ದಾರ್ಶನಿಕರಾಗಿ, ಸಮಾಜಕ್ಕೆ ಅನುಪಮ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಹೇಳಿದರು.

ಕುಲಸಚಿವ ಸಂತೋಷ ಕಾಮಗೌಡ,‘ಬುದ್ಧ ಮತ್ತು ಬಸವಣ್ಣನ ಆಶಯಗಳನ್ನು ಅಂಬೇಡ್ಕರ್ ಮೂಲಕ ನಾವು ಸಂವಿಧಾನದಲ್ಲಿ ಓದಬಹುದು’ ಎಂದು ತಿಳಿಸಿದರು.

ಲತಾರಾಣಿ, ‘ಇಂದು ಯುವಜನರು ಸದೃಢ ದೇಹ ಮತ್ತು ಸ್ವಸ್ಥ ಮನಸ್ಸು ಬೆಳಸಿಕೊಳ್ಳುವತ್ತ ಗಮನ ಹರಿಸಬೇಕು’ ಎಂದರು.

ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಅಶೋಕ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಯೋಜಕರಾದ ಮಹೇಶ ಕುಮಾರ ಎನ್., ಅಶ್ವಿನಿ ಜಾಮೂನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-1290209177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.