ಬೆಳಗಾವಿ: ‘18 ವರ್ಷದೊಳಗಿನ ಅನೇಕ ಮಕ್ಕಳು ಧೈರ್ಯದಿಂದ ಮಧುಮೇಹ ಎದುರಿಸುತ್ತಿದ್ದಾರೆ. ಇನ್ಸೂಲಿನ್ ಅವಲಂಬಿತವಾಗಿದ್ದರೂ ಸಾಮಾನ್ಯ ಮಕ್ಕಳಂತೆ ಶಿಕ್ಷಣ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ’ ಎಂದು ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ನ(ಕಾಹೇರ್) ಉಪಕುಲಪತಿ ಡಾ.ಸಂದೀಪ ಶ್ರೀವಾತ್ಸವ ಹೇಳಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರದಲ್ಲಿ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗಾಗಿ ಗುರುವಾರ ಆಯೋಜಿಸಿದ್ದ 25ನೇ ವಾರ್ಷಿಕ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಇಂದು ಮಧುಮೇಹದ ರಾಜಧಾನಿಯಾಗುತ್ತಿದೆ. ಸರ್ಕಾರದ ಜತೆಗೆ ಖಾಸಗಿ ಹಾಗೂ ಸಾಮಾಜಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಧುಮೇಹ ಮಕ್ಕಳಿಗೆ ಅವಶ್ಯ ಚಿಕಿತ್ಸೆ ನೀಡಲು ಕೈಜೋಡಿಸಬೇಕು’ ಎಂದು ಕೋರಿದರು.

‘ಮಧುಮೇಹ ಮಕ್ಕಳ ಆರೈಕೆ, ಶಿಕ್ಷಣ ಹಾಗೂ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಡಾ.ಜಾಲಿ ದಂಪತಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂಥ ಮಾದರಿ ಸಂಸ್ಥೆಗಳು ಭಾರತದಾದ್ಯಂತ ಕಾರ್ಯನಿರ್ವಹಿಸಬೇಕು’ ಎಂದರು.

‘ಮಧುಮೇಹ ಪೀಡಿತ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ, ಹೆಚ್ಚು ಜವಾಬ್ದಾರಿಯುತರು ಮತ್ತು ಚತುರರಾಗಿದ್ದಾರೆ. ಆಹಾರ ನಿಯಂತ್ರಣ, ಕ್ಯಾಲೊರಿಗಳ ಲೆಕ್ಕಾಚಾರ ಹಾಗೂ ಜೀವನಶೈಲಿಯಲ್ಲಿ ಶಿಸ್ತನ್ನು ಅವರು ಬಾಲ್ಯದಲ್ಲೇ ಕಲಿಯುತ್ತಾರೆ. ಇದರಿಂದ ಅವರು ಹೆಚ್ಚು ಸಹನಶೀಲರಾಗುತ್ತಾರೆ’ ಎಂದು ಹೇಳಿದರು. ಚಿಕ್ಕ ಮಕ್ಕಳ ಮಧುಮೇಹ ತಜ್ಞವೈದ್ಯೆ ಡಾ.ಸುಜಾತಾ ಜಾಲಿ, ‘ನಮ್ಮ ಕೇಂದ್ರದಲ್ಲಿ ಸುಮಾರು 625 ಮಕ್ಕಳು ನಿರಂತರವಾಗಿ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯುತ್ತಿದ್ದಾರೆ. ಮಧುಮೇಹ ಇದ್ದರೂ ಸಾಮಾನ್ಯವಾಗಿ ಜೀವನ ನಡೆಸಬಹುದು, ಮದುವೆಯಾಗಬಹುದು ಹಾಗೂ ಉನ್ನತ ಸಾಧನೆ ಮಾಡಬಹುದು ಎಂಬ ವಿಶ್ವಾಸವನ್ನು ಅವರಲ್ಲಿ ಬೆಳೆಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಮಕ್ಕಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. 10 ತಿಂಗಳ ಒಳಗಿನ ಮಧುಮೇಹ ಪೀಡಿತ ಶಿಶುಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಕರ್ನಲ್ ಎಂ.ದಯಾ ನಂದ, ‘ಮಧುಮೇಹ ತಪಾಸಣೆ ಮತ್ತು ಚಿಕಿತ್ಸೆಯನ್ನು ಇನ್ನಷ್ಟು ವಿಸ್ತರಿಸಿ, ಪ್ರತಿ ಮಗುವಿಗೂ ಅನುಕೂಲ ಕಲ್ಪಿಸಲು ಕಾರ್ಯಯೋಜನೆ ರೂಪಿಸಲಾಗುವುದು’ ಎಂದರು.

ಕಾಹೇರ್ ಕುಲಸಚಿವ ಡಾ.ವಿ.ಎಂ.ಪಟ್ಟಣಶೆಟ್ಟಿ, ಜೆಎನ್ಎಂಸಿ ಪ್ರಾಚಾರ್ಯ ಡಾ.ರಾಜೇಶ ಪವಾರ, ಹಿರಿಯ ಮಧುಮೇಹ ತಜ್ಞ ಡಾ.ಎಂ.ವಿ.ಜಾಲಿ, ಡಾ.ವಿ.ಡಿ.ಪಾಟೀಲ, ಡಾ. ಆರ್.ಎಸ್. ಮುಧೋಳ ಇತರರಿದ್ದರು. ಡಾ.ನಂದಿತಾ ಕಾರ್ಯಕ್ರಮ ನಿರೂಪಿಸಿದರು. ಡಾ. ಜ್ಯೋತಿ ವಾಸೇದಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-21-1901045182

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.