ಬೆಳಗಾವಿ: ‘ಅಪಘಾತ ಹಾಗೂ ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ಅವಶ್ಯವಿರುವ ಚಿಕಿತ್ಸೆಯನ್ನು ನೀಡುತ್ತ, ತಡಮಾಡದೇ ಸಕಲ ವ್ಯವಸ್ಥೆಯಿರುವ ಆಸ್ಪತ್ರೆಗೆ ಸಾಗಿಸಬೇಕು. ಸುವರ್ಣ ಘಳಿಗೆ (ಗೋಲ್ಟನ್ ಅವರ್) ಅವಧಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ರೋಗಿಯ ಪ್ರಾಣ ಉಳಿಸಲು ಸಹಕರಿಸಬೇಕು’ ಎಂದು ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ಎಂ. ದಯಾನಂದ ಹೇಳಿದರು.

ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ತುರ್ತುಚಿಕಿತ್ಸಾ ಮೆಡಿಸಿನ್ ವಿಭಾಗವು ಈಚೆಗೆ ಏರ್ಪಡಿಸಿದ್ದ ವಿಶ್ವ ತುರ್ತು ಚಿಕಿತ್ಸಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ನಗರದಲ್ಲಿಯೂ ಸಹ ತುರ್ತು ವೈದ್ಯಕೀಯ ಸೇವೆಗಳ ಮಹತ್ವದ ಬಗ್ಗೆ ಸರಿಯಾದ ಅರಿವು ಇಲ್ಲ. ಅತ್ಯುತ್ತಮ ತುರ್ತು ಚಿಕಿತ್ಸೆ ಕೆಎಲ್ಇ ಸಂಸ್ಥೆಯ ಡಾ.ಕೋರೆ ಆಸ್ಪತ್ರೆಯಲ್ಲೇ ಲಭ್ಯವಿದೆ’ ಎಂದರು.

ಕಾಹೆರ್ನ ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ. ಪಾಟೀಲ, ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಡಾ.ಮಾಧವ ಪ್ರಭು, ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಶೈಲೇಶ ಉದಪುಡಿ ಮಾತನಾಡಿದರು. ಡಾ.ಎಂ.ವಿ. ಜಾಲಿ, ಕಾಲೇಜಿನ ಉಪಪ್ರಾಚಾರ್ಯ ಡಾ.ಶಿವಾನಂದ ಬುಬನಾಳೆ, ಡಾ.ಆರ್.ಎಸ್. ಮುಧೋಳ, ಡಾ.ರವಿ ಜತ್ತಿ, ಡಾ.ರೇಖಾ ಪಾಟೀಲ, ಡಾ.ಜ್ಞಾನೇಶ ಕಾಂಬಳೆ, ಡಾ.ಬಸವರಾಜ ಬಿಜ್ಜರಗಿ, ಡಾ.ಮಹೇಶ ಹಟ್ಟಿ ಡಾ.ಸಚೀನ ವಾಲಿ, ಜನಸಂಪರ್ಕಾಧಿಕಾರಿ ಗಂಗಾಧರ ದೇಶನೂರ, ಮಾರ್ಕೆಟಿಂಗ ವಿಭಾಗದ ನಿಖಿಲ ಸಾವಂತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-1023725463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.