ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನದ ಅಂಗವಾಗಿ ಸುನೀಲ ಪರೀಟ ಅವರ ‘ನಮ್ಮ ತಾಯಿ ದೇವರು’ ಹಾಗೂ ‘ವ್ಯಕ್ತಿ ಶಕ್ತಿ’ ಎಂಬ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.

ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿ ಬಿ.ಎಂ. ಕಟ್ಟಿ ಮಾತನಾಡಿ, ‘ತಾಯಿಗೆ ಸಮರ್ಪಿತವಾದ ಇಂಥ ಕೃತಿಗಳು ಯಾವುದೇ ಕಾಲದಲ್ಲಿ ಉತ್ತಮ ಪ್ರಭಾವವನ್ನು ಬೀರುತ್ತವೆ’ ಎಂದು ಹೇಳಿದರು.

ಕನ್ನಡ ಪ್ರಾಧ್ಯಾಪಕ ರಾಜಶೇಖರ ಬಿರಾದಾರ 'ನಮ್ಮ ತಾಯಿ ದೇವರು' ಪುಸ್ತಕ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಅಡಿವೇಶ ಇಟಗಿ ಅವರು ‘ವ್ಯಕ್ಯಿ ಶಕ್ತಿ’ ಕೃತಿ ಪರಿಚಯಿಸಿದರು.

ಹಿರಿಯ ಸಾಹಿತಿ ಜಯಶೀಲಾ ಬ್ಯಾಕೋಡ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಸಂಪಾದಕ ಹಾಗೂ ಲೇಖಕ ಸುನೀಲ ಪರೀಟ ಅವರು ತಮ್ಮಭಾಷಣದಲ್ಲಿ, ‘ಕೃತಿಗಳ ಕುರಿತು ತಮ್ಮ ಒಡಲಾಳದ ಅನುಭವವನ್ನು ಹಂಚಿಕೊಂಡರು. ಸುಮಾ ದೊಡಮನಿ, ಎಂ.ಎಸ್. ಹಿರೇಮಠ,ಹೇಮಾ ಸೊನ್ನೊಳ್ಳಿ, ಶಿವು ನಂದಗಾಂವ, ಎಂ.ವೈ. ಮೆಣಸಿನಕಾಯಿ, ಈರಣ್ಣ ಆಲೂರ, ಸುಮತಿ ಶಂಕರಗೌಡ ಮುಂತಾದವರು ಇದ್ದರು.

ಸಾಹಿತ್ಯಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯಮಟ್ಟದ ಮಾತೃ ಸಾಹಿತ್ಯ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅನುರಾಧಾ ಕೋಲ್ಕಾರ ನಾಡಗೀತೆ ಪ್ರಸ್ತುತಪಡಿಸಿದರು, ಗಂಗಮ್ಮಾ ಪಾಟೀಲ ನಿರೂಪಿಸಿದರು, ಎಂ. ವೈ. ಮೆಣಸಿನಕಾಯಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-21-2074990411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.