ಬೆಳಗಾವಿ: ‘ಸಂಗೀತ ಮನಸನ್ನು ಅರಳಿಸುತ್ತದೆ. ಭಾವನೆಗಳಿಗೆ ಶಕ್ತಿ ತುಂಬುತ್ತದೆ. ಮನಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಭಾರತೀಯ ದರ್ಶನವಿರುವುದು ಸಂಗೀತದಲ್ಲಿ. ಅದನ್ನು ಮಕ್ಕಳಿಗೆ ಉಣಬಡಿಸಬೇಕು’ ಎಂದು ಕಾಹೆರ್ ಉಪಕುಲಪತಿ ಪ್ರೊ.ಸಂದೀಪ್ ಶ್ರೀವಾತ್ಸವ ಹೇಳಿದರು.

ಜೆಎನ್ಎಂಸಿ ಕನ್ವೆನ್ಷನ್ ಸೆಂಟರ್ನ ಡಾ.ಎಚ್.ಬಿ.ರಾಜಶೇಖರ ಸಭಾಂಗಣದಲ್ಲಿ ಕಾಹೆರ್ ವಿ.ವಿ. ಸಂಗೀತ ಶಾಲೆಯು ಮಕ್ಕಳಿಗಾಗಿ ಶನಿವಾರ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ಕೆಎಲ್ಈ ವಿಶ್ವವಿದ್ಯಾಲಯದ ಕುಲಸಚಿವ ವಿ.ಎನ್. ಪಟ್ಟಣಶೆಟ್ಟಿಶೆಟ್ಟಿ ಮಾತನಾಡಿ, ‘ಮಕ್ಕಳಿಗೆ ಸಂಗೀತ, ನೃತ್ಯ, ವಾದ್ಯ ಸಂಗೀತದ ಲಲಿತ ಕಲೆಗಳ ಅಭಿರುಚಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ಕೆಎಲ್ಇ ಸಂಗೀತ ಶಾಲೆ ಪ್ರತಿವರ್ಷ ಮಕ್ಕಳಿಗೆ ಸಂಗೀತ ಶಿಬಿರಗಳನ್ನು ಆಯೋಜಿಸುತ್ತಿದೆ’ ಎಂದು ಹೇಳಿದರು.

ಶಿಬಿರದಲ್ಲಿ 106 ಮಕ್ಕಳು ಪಾಲ್ಗೊಂಡಿದ್ದರು. ಶಾಸ್ತ್ರೀಯ ಗಾಯನ ಹಾಗೂ ಬಾಲ ಗೀತೆಗಳು, ಭರತನಾಟ್ಯ, ಹಾರ್ಮೋನಿಯಂ, ತಬಲಾ ವಾದ್ಯಗಳ ತರಬೇತಿ ನೀಡಲಾಯಿತು.

ಪುಟ್ಟ ಕೈಗಳು ತಬಲಾ, ಹಾರ್ಮೋನಿಯಂ ವಾದ್ಯಗಳಲ್ಲಿ ಅನೇಕ ರಾಗಗಳನ್ನು, ಭಕ್ತಿಗೀತೆಗಳನ್ನು ನುಡಿಸಿ ಪ್ರೇಕ್ಷಕರ ಹೃದಯ ಸೂರೆಗೊಳಿಸಿದರು.

ಸಂಗೀತ ಶಾಲೆಯ ಸಂಯೋಜಕ ರಾಜೇಂದ್ರ ಭಂಡಾನಕರ, ಪ್ರಾಚಾರ್ಯ ಪಂಡಿತ ರಾಜಾರಾಮ ಅಂಬರಡಿಕರ, ಸುನೀತಾ ಪಾಟೀಲ, ದುರ್ಗಾ ನಾಡಕರ್ಣಿ, ಸಂಗೀತ ಶಿಕ್ಷಕಿ ಸಂಗೀತಾ ಕುಲಕರ್ಣಿ, ವಿಲಾಸ ಭೋಸ್ಲೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-21-401750479

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.