ಬೆಳಗಾವಿ: ಪಿರನವಾಡಿಯ ಮಹಾಲಕ್ಷ್ಮೀ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿ ವಿದ್ಯಾರ್ಥಿಗಳಿಗಾಗಿ, ಇಲ್ಲಿನ ನಂದಾದೀಪ ನೇತ್ರಾಲಯದಲ್ಲಿ ಶುಕ್ರವಾರ ಸಮಗ್ರ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಮುಖ್ಯ ಅತಿಥಿಯಾಗಿ ನಿವೃತ್ತ ಎನ್ಎಸ್ಜಿ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸುರೇಶ್ ಸನದಿ ಆಗಮಿಸಿದ್ದರು. ತಮ್ಮ ವಿಶಿಷ್ಟ ಸೈನಿಕ ಅನುಭವವನ್ನು ಹಂಚಿಕೊಂಡ ಅವರು, ಕರ್ತವ್ಯ ನಿರ್ವಹಣೆಯಲ್ಲಿ ಪರಿಪೂರ್ಣ ದೃಷ್ಟಿ ಹಾಗೂ ದೈಹಿಕ ಕ್ಷಮತೆಯ ಮಹತ್ವ ಒತ್ತಿ ಹೇಳಿದರು.

ನಂದಾದೀಪ ನೇತ್ರಾಲಯದ ನಿರ್ದೇಶಕಿ ಡಾ.ನಿಧಿ ಪಾಟವರ್ಧನ್ ಮಾತನಾಡಿ, ಆಸ್ಪತ್ರೆಯ ಇತ್ತೀಚಿನ ತಾಂತ್ರಿಕ ಅಭಿವೃದ್ಧಿ, ವಿಶೇಷ ಲಾಸಿಕ್ ಶಸ್ತ್ರಚಿಕಿತ್ಸಾ ಅಭಿಯಾನ, ದೃಷ್ಟಿದೋಷ ಸರಿಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗಾಗಿ ವಿಶೇಷ ಪರಿಹಾರಗಳನ್ನು ಒದಗಿಸಿದ ಬಗ್ಗೆ ವಿವರಿಸಿದರು.

ಮಹಾಲಕ್ಷ್ಮೀ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿಯ ಒಟ್ಟು 80 ವಿದ್ಯಾರ್ಥಿಗಳು ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟರು. ಡಾ.ಸೌರವ್ ಪಾಟೀಲ ಹಾಗೂ ಡಾ.ಎ.ಆರ್. ಪರಾಯಿ ಅವರ ತಂಡ ತಪಾಸಣೆ ಮಾಡಿತು. ನಂದಾದೀಪ ನೇತ್ರಾಲಯದ ಆಡಳಿತಾಧಿಕಾರಿ ಆನಂದ ತುಪ್ಪದ ಸಂಯೋಜಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-21-1090485467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.