ಕಚೇರಿಗೆ ಬಂದಿದ್ದ ಇವರ ಮುಂದೆ ಕುಳಿತಾಗ, ‘ನಮಸ್ತೆ ನಾನು ಸಿದ್ದು ಲೌಟೆ, ಸೂಪರ್ ಹ್ಯೂಮನ್ ಕಂಪ್ಯೂಟರ್...’ ಎಂದು ತಮ್ಮನ್ನು ಪರಿಚಯಿಸಿಕೊಂಡರು.

ನಾನು ‘ಗೊತ್ತಿದೆ... ನಿಮ್ಮ ಬಗ್ಗೆ ಓದಿದ್ದೆ. ಪುನೀತ್ ರಾಜ್ಕುಮಾರ್ ಅವರ ಜೊತೆ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವನ್ನು ನೋಡಿದ್ದೆ’ ಎಂದೆ. ಬಳಿಕ ಅವರನ್ನು ಪರೀಕ್ಷಿಸಲು ‘ನಾನು ಹುಟ್ಟಿದ್ದು 1992ರ ಮೇ ಎರಡನೇ ಭಾನುವಾರ’ ಎಂದಿದ್ದೇ ತಡ...

ಒಂದರೆಕ್ಷಣ ತಲೆಯಾಡಿಸಿದ ಅವರಿಂದ ‘10’ ಎಂಬ ಪ್ರತಿಕ್ರಿಯೆ ಬಂತು. ನಾನು ಚಕಿತನಾದೆ. ಕಣ್ಣಿಲ್ಲದಿದ್ದರೂ ಅವರ ಮಿದುಳಿನ ಓಟ ಮಿಂಚಿನ ಓಟದಂತಿತ್ತು.

ಬೆಳಗಾವಿಯ ಅಥಣಿ ತಾಲ್ಲೂಕಿನ ಕಕಮರಿಯ ಸಿದ್ದು ಲೌಟೆ ‘ಸೂಪರ್ ಹ್ಯೂಮನ್ ಕಂಪ್ಯೂಟರ್’ ಎಂದೇ ಖ್ಯಾತಿ ಪಡೆದವರು. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರು. ಇದು ಸಹಜವಾಗಿ ಅವರನ್ನು, ಕುಟುಂಬದವರನ್ನು ಕಾಡಿತ್ತು. ತಿರಸ್ಕಾರ, ತಾರತಮ್ಯ ಬೆನ್ನಿಗೆ ಅಂಟಿತು. ಇಂತಹ ಸ್ಥಿತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಯಿತು.

ಹೀಗಿದ್ದಾಗ ಒಂದು ದಿನ ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ನೂರರವರೆಗೆ ಮಗ್ಗಿ ಹೇಳಿದ್ದಕ್ಕೆ ವಿಶೇಷ ಪ್ರಶಸ್ತಿ ಪಡೆದುಕೊಂಡಿದ್ದ. ಆ ವಿದ್ಯಾರ್ಥಿಯನ್ನು ಎಲ್ಲರೂ ಗೌರವದಿಂದ ನಡೆಸಿಕೊಳ್ಳುತ್ತಿದ್ದದ್ದು ಸಿದ್ದು ಅವರ ಗಮನ ಸೆಳೆಯಿತು. ಅದುವೇ ಅವರಿಗೆ ಪ್ರೇರಣೆಯಾಯಿತು.

ಬೆಳಕಿದ್ದೂ ಕತ್ತಲಲ್ಲೇ ಇದ್ದ ಅವರು, ಮಗ್ಗಿಯನ್ನು ಕೇವಲ ಪಾಠವನ್ನಾಗಿ ಕಲಿತಿಲ್ಲ, ಅದನ್ನೇ ತಮ್ಮ ಚಿಂತನೆಯ ಭಾಗವನ್ನಾಗಿ ಮಾಡಿಕೊಂಡರು. ಹಗಲು–ರಾತ್ರಿ ಅಭ್ಯಾಸದ ಮೂಲಕ ಸಂಖ್ಯೆಗಳೊಂದಿಗೆ ಒಂದು ಅಪರೂಪದ ಸ್ನೇಹ ಬೆಳೆಸಿಕೊಂಡರು.

ಒಂದು ಹಂತದಲ್ಲಿ ಅವರು ಎಲ್ಲರನ್ನೂ ಬೆರಗುಗೊಳಿಸಿದರು. ನೂರಲ್ಲ… ಸಾವಿರವೂ ಅಲ್ಲ…ಲಕ್ಷಾಂತರ ಸಂಖ್ಯೆಗಳ ಮಟ್ಟದ ಲೆಕ್ಕಾಚಾರವನ್ನು ಮನಸ್ಸಿನಲ್ಲೇ ನಿಭಾಯಿಸುವ ಸಾಮರ್ಥ್ಯ!

ಇಲ್ಲಿಂದ ಅವರ ಹೊಸ ಪಯಣ ಆರಂಭವಾಯಿತು. ದೌರ್ಬಲ್ಯವನ್ನೇ ದಿನದ 24 ಗಂಟೆಯೂ ಶಕ್ತಿಯನ್ನಾಗಿ ರೂಪಿಸಿಕೊಂಡ ಇವರ ಕಥೆಯೇ ಸ್ಫೂರ್ತಿದಾಯಕ.

‘ಕಣ್ಣು ಇಲ್ಲದೇ ಇದ್ದರೂ ವಿಷಯಗಳನ್ನು ಇತರರಿಗಿಂತ ಬೇಗನೇ ಗ್ರಹಿಸುವ ವಿಶೇಷ ಶಕ್ತಿ ನನ್ನೊಳಗೆ ಇರುವುದನ್ನು ನಾನು ಅನುಭವಿಸಿದ್ದೇನೆ. ಇದನ್ನು ಮಾತಿನಲ್ಲಿ ಹೇಳಲು ಕಷ್ಟ. ಯಾವುದೇ ಭಾವನಾತ್ಮಕ ಬೆಂಬಲವೂ ಇಲ್ಲದೆ ಹುಬ್ಬಳ್ಳಿಯಲ್ಲಿ ಹಾಸ್ಟೆಲ್ನಲ್ಲಿ ಇದ್ದುಕೊಂಡು ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದೆ. ಪ್ರೌಢಶಾಲೆಯಲ್ಲಿ ಕೆಲ ಸಹಪಾಠಿಗಳು ನನ್ನ ಮೇಲಿನ ಅಸೂಯೆಯಿಂದ ಪ್ರಶಸ್ತಿ ಪತ್ರಗಳನ್ನು ಹರಿದು ಹಾಕಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಘಾಸಿಯಾಗಿ ಉಳಿದಿದೆ. ಕಾಗದ ಹರಿದರೂ ನನ್ನೊಳಗಿನ ಬೌದ್ಧಿಕ ಶಕ್ತಿ ಹರಿತವಾಗುತ್ತಲೇ ಇತ್ತು.’

‘ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ರಾಜಧಾನಿ ಪಾಲಾದೆ. ಪಿಯುಸಿ ಶಿಕ್ಷಣದ ಜೊತೆಗೆ ಇಂಗ್ಲಿಷ್ ಮಾತನಾಡುವ ಕೋರ್ಸ್ ಸೇರಿಕೊಂಡೆ. ನಂತರ ಎಲ್ಎಲ್ಬಿ ಪದವಿಗಾಗಿ ಎಂ ಎಸ್ ರಾಮಯ್ಯ ಕಾಲೇಜು ಸೇರಿಕೊಂಡೆ. ಐಎಎಸ್ ಕನಸು ಕಂಡೆ. ಇದರ ಜೊತೆಗೆ ಮಿದುಳಿಗೆ ಕೆಲಸ ನೀಡುತ್ತಿದ್ದೆ. ಪ್ರಸ್ತುತ ಯಾವುದೇ ದೊಡ್ಡ ಸಂಖ್ಯೆಗಳ ಗುಣಾಕಾರವನ್ನು ತಕ್ಷಣವೇ ಮಾಡಬಲ್ಲೆ. ನನ್ನ ಮಿದುಳಿನಲ್ಲಿ ಸಾವಿರಾರು ಮೊಬೈಲ್ ಸಂಖ್ಯೆಗಳು ದಾಖಲಾಗಿವೆ. ಯಾವುದೇ ವರ್ಷದ ಯಾವುದೇ ದಿನ ಕೇಳಿದರೂ ವಾರವನ್ನು ತಿಳಿಸಬಲ್ಲೆ; ಅದೇ ರೀತಿ ವಾರ ಹೇಳಿದರೆ ದಿನಾಂಕ ಹೇಳಬಲ್ಲೆ’ ಎನ್ನುತ್ತಾ ಸಣ್ಣಗೆ ನಕ್ಕರು.

‘ಕಣ್ಣು ಕಾಣದೇ ಇರುವುದರಿಂದ ತೊಂದರೆ ಎನಿಸುವುದಿಲ್ಲವೇ’ ಎಂಬ ನನ್ನ ಪ್ರಶ್ನೆಗೆ,‘ರಾತ್ರಿ ಕರೆಂಟ್ ಹೋದರೆ ನೀವು ಮೊಬೈಲ್ ಲೈಟ್, ಟಾರ್ಚು ಹುಡುಕುತೀರಿ. ಬೆಳಕಿಲ್ಲದೆ ಇದ್ದರೆ ನಿಮಗೇ ಕಣ್ಣು ಕಾಣಿಸಲ್ಲ’ ಎಂದು ಥಟ್ಟನೆ ಉತ್ತರ ನೀಡಿ ಸುಮ್ಮನಾದರು.

‘ನನ್ನ ಕಥೆ ಇನ್ನೂ ಇದೆ’ ಎನ್ನುತ್ತಾ ಮಾತು ಮುಂದುವರಿಸಿದ ಅವರು, ‘ನಾನು ಟಿವಿ ಚಾನೆಲ್ ಒಂದರಲ್ಲಿ ಆ್ಯಂಕರ್ ಆಗಿದ್ದೆ. ಹಿಂದಿಯ ‘ಎಂಟರ್ಟೈನ್ಮೆಂಟ್ ಕೇ ಲಿಯೇ ಕುಚ್ ಬಿ ಕರೇಗಾ’ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದೇನೆ. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ನಟಿಸಿದ್ದೇನೆ. ಸಾಧನೆ ಮಾಡುವ ಛಲವಿದ್ದರೆ ಯಾವ ದೈಹಿಕ ನ್ಯೂನತೆಗಳೂ ಅಡ್ಡಿಯಾಗಲಾರದು ಎನ್ನುವುದು ನನ್ನ ನಂಬಿಕೆ.’

‘ಹೀಗಾಗಿಯೇ ನನ್ನ ಕಥೆಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತೇನೆ. ನನ್ನ ರೀತಿ ಹಲವರು ವಿವಿಧ ಕಾರಣಗಳಿಗೆ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ.ಅವರೊಂದಿಗೆ ಮಾತನಾಡಿ, ನನ್ನ ಅನುಭವ ಹಂಚಿಕೊಂಡು, ಸಮಾಲೋಚನೆ ನಡೆಸಿ ಧೈರ್ಯ ತುಂಬುತ್ತಿದ್ದೇನೆ’ ಎಂದರು ಸಿದ್ದು.

ದಾಖಲೆ ಬರೆಯುವ ಉದ್ದೇಶದಿಂದ ಸಿನಿಮಾವೊಂದನ್ನು ನಿರ್ದೇಶಿಸುವ ಯೋಜನೆಯನ್ನು ಸಿದ್ದು ಹಾಕಿಕೊಂಡಿದ್ದಾರೆ. ಕಥೆ ಸಿದ್ಧಪಡಿಸಿಕೊಂಡು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಮುಂದೆ ಅಸಾಧ್ಯವೆನ್ನಿಸಬಹುದಾದಷ್ಟು ದೀರ್ಘಕಾಲಾವಧಿಯನ್ನು ಒಳಗೊಂಡ ಕ್ಯಾಲೆಂಡರ್ ರೂಪಿಸುವ ಆಲೋಚನೆಯೂ ಇದೆ. ಜೊತೆಗೆ ಕನ್ನಡ–ಇಂಗ್ಲಿಷ್ ನಿಘಂಟನ್ನು ಸಂಪೂರ್ಣವಾಗಿ ಮನನ ಮಾಡಿಕೊಳ್ಳುವ ಕೆಲಸ ಆರಂಭಿಸಿದ್ದಾರೆ. ಪದಗಳ ಸಾಂದರ್ಭಿಕ ಮತ್ತು ವಿಶೇಷ ಅರ್ಥಗಳನ್ನು ಕಂಠಪಾಠ ಮಾಡುತ್ತಿದ್ದಾರೆ. ಇವು ಬ್ರೈಲ್ನಲ್ಲಿ ಲಭ್ಯವಿಲ್ಲದ ಕಾರಣ, ಮೊಬೈಲ್ನ ಟಾಕಿಂಗ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.

ಆರೋಗ್ಯ ಸವಾಲುಗಳ ನಡುವೆಯೂ ಅವರು ಕನಸು ಕಾಣುವುದನ್ನು, ಮಿದುಳಿಗೆ ಸಾಣೆ ಹಿಡಿಯುವುದನ್ನು ನಿಲ್ಲಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.