ಬೆಳಗಾವಿ: ‘ಇತಿಹಾಸವೆಂದರೆ ಕೇವಲ ಕೋಟೆ– ಕೊತ್ತಲಗಳಲ್ಲಿ ಅಷ್ಟೇ ಇಲ್ಲ. ಗುಡಿಸಲುಗಳಲ್ಲಿ ಬಡತನದ ಬೇಗೆಯಲ್ಲಿ ಬೆಂದ, ಕ್ರಾಂತಿಯ ಜ್ವಾಲೆಗಳಾಗಿ ಪ್ರಜ್ವಲಿಸಿದ, ಸ್ವಾತಂತ್ರ್ಯ ಹೋರಾಟದ ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ’ ಎಂದು ಪ್ರೊ.ಗೀತಾಂಜಲಿ ಕುರುಡಗಿ ಅಭಿಪ್ರಾಯ ಪಟ್ಟರು.

ಯುವ ಬರಹಗಾರರ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಚೇರಿಯಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಸಿಂಧೂರ ಲಕ್ಷ್ಮಣ ಜಯಂತಿಯ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

‘ಸಿಂಧೂರ ಲಕ್ಷ್ಮಣನ ಇಡೀ ಜೀವನ ಚರಿತ್ರೆಯನ್ನು ಸ್ವಾತಂತ್ರ್ಯ ಹೋರಾಟಗಳ ಹಿನ್ನೆಲೆಯಲ್ಲಿ ಕಟ್ಟಿ ಕೊಡುವುದಕ್ಕಿಂತ, ಕೇವಲ ಬ್ರಿಟಿಷ್ ಆಡಳಿತದ ಕಡತಗಳ ದೃಷ್ಟಿಯಲ್ಲಿ ನೋಡುವುದಕ್ಕಿಂತ ಜಾನಪದ ಸಾಹಿತ್ಯವಾದ ಲಾವಣಿ, ಸೋಬಾನೆ ಪದ, ಬಿಸುಕಲ್ಲಿನ ಹಾಡುಗಳಂತಹ ವೀರಗಾತೆಗಳನ್ನು ಗಮನಿಸಬೇಕು. ಸಿಂಧೂರ ಲಕ್ಷ್ಮಣನ ನಿಜ ಚರಿತ್ರೆಯನ್ನು ಅರ್ಥೈಸಿಕೊಳ್ಳಬಹುದು’ ಎಂದರು.

ಆಶಯ ಭಾಷಣ ಮಾಡಿದ ಯುವ ಬರಹಗಾರ ನೀಲಪ್ಪ ವಾಲಿಕಾರ, ‘ವಿಶ್ವವಿದ್ಯಾಲಯಗಳಲ್ಲಿ ಸಿಂಧೂರ ಲಕ್ಷ್ಮಣನ ಅಧ್ಯಯನ ಪೀಠಗಳನ್ನು ಆರಂಭಿಸಿ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಸತ್ಯ ಸಂಗತಿಗಳ ಚರಿತ್ರೆಯನ್ನು ಕಟ್ಟಿಕೊಡಬೇಕು’ ಎಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಿ.ಗು. ಕುಸಗಲ್ಲ ಮಾತನಾಡಿದರು.

ಲಕ್ಷ್ಮೀ ಗಡಕರಿ ಹಾಡಿದ ಸಿಂಧೂರ ಲಕ್ಷ್ಮಣ ಲಾವಣಿಯ ಹಾಡು ಸಭೆಯನ್ನು ಮಂತ್ರಮುಗ್ದವಾಗಿಸಿತು. ಸಂಚಾಲಕರಾದ ಪ್ರೊ.ದೇಮಣ್ಣ ಸೊಗಲದ, ಬಾಲಕೃಷ್ಣ ನಾಯಕ, ಮಂಜುನಾಥ ಪಾಟೀಲ, ಬಾಳೇಶ ದಾಸನಟ್ಟಿ ವೇದಿಕೆ ಮೇಲಿದ್ದರು. ಭೀಮಶಿ ಕನಕನ್ನವರ ಸ್ವಾಗತಿಸಿದರು. ಪ್ರತಿಭಾ ಕಲ್ಲಿ ವಂದಿಸಿದರು. ಈರಣ್ಣ ಬೇಟಗೇರಿ ನಿರೂಪಿಸಿದರು.

ಹಿರಿಯರಾದ ಅಶೋಕ ಚಂದರಗಿ, ಕೆ.ಎನ್. ದೊಡ್ಡಮನಿ, ಮಲ್ಲಿಕಾರ್ಜುನ ಲೋಕಳೆ, ಮಹೇಶ ಗಾಜಪ್ಪನವರ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-710222700

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.