ಬೆಳಗಾವಿ: ಭಾರತೀಯ ಸಂಸ್ಕೃತಿ, ಮಹಾನ್ ನಾಯಕರು, ಮಹಿಳೆಯರು ಹಾಗೂ ಆದರ್ಶ ವ್ಯಕ್ತಿತ್ವಗಳನ್ನು ಆಧರಿಸಿ ಕನ್ನಡ ಶಿಶುಗೀತೆಗಳನ್ನು (ರೇಮ್ಸ್) ಇಲ್ಲಿನ ಬಿರ್ಲಾ ಇಂಟರ್ನ್ಯಾಷನಲ್ ಶಾಲೆ ಆರನೇ ತರಗತಿ ವಿದ್ಯಾರ್ಥಿನಿ ಲಾವಣ್ಯ ಪೃಥ್ವಿರಾಜ್ ಕಮ್ಮಾರ ರಚಿಸಿದ್ದಾರೆ.

‘ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಅಥವಾ ‘ಜಾಕ್ ಆ್ಯಂಡ್ ಜಿಲ್’ ಎಂಬ ಪಾಶ್ಚಾತ್ಯ ಕವಿತೆ ಕಲಿಸಲಾಗುತ್ತದೆ. ಆದರೆ, ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಕಲಿಸುವ ಉದ್ದೇಶದಿಂದ ಕನ್ನಡ ಶಿಶುಗೀತೆಗಳನ್ನು ಒಳಗೊಂಡ ‘ದಿ ಶ್ಯಾಡೋ ಆಫ್ ಇನ್ನೋಸೆನ್ಸ್ ಆ್ಯಂಡ್ ಇಮ್ಯಾಜಿನೇಷನ್- ರೇಮ್ಸ್ ಫ್ರಮ್ ಬೆಳಗಾವಿ ಟು ಭಾರತ’ ಎಂಬ ಕೃತಿ ರಚಿಸಿದ್ದೇನೆ’ ಎಂದು ಲಾವಣ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವೀರರಾಣಿ ಕಿತ್ತೂರು ಚನ್ನಮ್ಮ, ಶಿವಾಜಿ ಮಹಾರಾಜರು, ಭಗತ್ ಸೇರಿ ಅನೇಕ ಮಹಾನ್ ನಾಯಕರಿಗೆ ಸಂಬಂಧಿಸಿ ಕವಿತೆ ರಚಿಸಿದ್ದೇವೆ. ಇದಲ್ಲದೆ, ಹೆತ್ತವರು, ಶಿಕ್ಷಕರು ಮತ್ತು ಹಿರಿಯರ ಮಹತ್ವ ಸಾರುವ ಹಾಗೂ ಬೆಳಗಾವಿಯ ಶ್ರೀಮಂತ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವ ಕವಿತೆಗಳಿವೆ. ಕೃಷ್ಣ, ರಾಮ ಮತ್ತು ಶಿವನ ಕುರಿತಾದ ಸಾಲುಗಳು ಅಧ್ಯಾತ್ಮಿಕ ಪ್ರೇಮ ಬೆಳೆಸುತ್ತವೆ’ ಎಂದು ವಿವರಿಸಿದರು.

‘ಮಹಾನ್ ನಾಯಕರ ಜೀವನ ಚರಿತ್ರೆಗೆ ಸಂಬಂಧಿಸಿದ ಕೃತಿಗಳನ್ನು ನಿರಂತರವಾಗಿ ಓದಿ ಕವಿತೆ ಬರೆದಿದ್ದೇನೆ. ಶೀಘ್ರವೇ ಈ ಕೃತಿ ಲೋಕಾರ್ಪಣೆ ಆಗಲಿದೆ’ ಎಂದರು. ಶೀಘ್ರ ಈ ಕೃತಿ ಲೋಕಾರ್ಪಣೆ ಆಗಲಿದೆ’ ಎಂದರು.

ಪೃಥ್ವಿರಾಜ್ ಕಮ್ಮಾರ, ತಾತಿ ತಿಲೋತ್ತಮ ಚವ್ಹಾಣ, ಜಯರಾಜ್ ಚವಾಣ, ಜಿತೇಶ ಮೆಣಸಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-21-2057080201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.