ರಾಯಬಾಗ: ‘ದೇವರ ಸ್ಥಾನ ಆಕಾಶದಲ್ಲಾಗಲಿ, ಗುಡಿಯಲ್ಲಾಗಲಿ ಅಲ್ಲ; ಮನುಷ್ಯರ ಭಾವನೆಯಲ್ಲಿಯೇ ದೇವರ ನೆಲೆ ಇದೆ’ ಎಂದು ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.

ಚಿಂಚಲಿ ಪಟ್ಟಣದ ಮಾಲಿನಿ ಪಾಟೀಲ ಭವನದಲ್ಲಿ ಮಹಾಕಾಳಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 1992–93ನೇ ಸಾಲಿನ ಹಳೆಯ ವಿದ್ಯಾರ್ಥಿ ಬಳಗದಿಂದ ಶನಿವಾರ ಆಯೋಜಿಸಿದ್ದ ‘ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ದೇವರನ್ನು ದೇಹದಲ್ಲಿ ಕಂಡರೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ವಿದ್ಯೆಯಲ್ಲಿ ಕಂಡರು. ವರನಟ ಡಾ.ರಾಜಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡರೆ, ವಿದ್ಯಾರ್ಥಿಗಳಾದ ನೀವು ಅಕ್ಷರ ಕಲಿಸಿದ ಗುರುಗಳಲ್ಲಿ ದೇವರನ್ನು ಕಾಣುತ್ತಿರುವುದು ವೈಚಾರಿಕ ದೃಷ್ಟಿಯ ವಿಸ್ತಾರವಾಗಿದೆ’ ಎಂದು ಹೇಳಿದರು.

ಚಿಂಚಲಿ ಪಟ್ಟಣದ ವೇದಾಂತ ಕೇಸರಿ ಮಲ್ಲಿಕಾರ್ಜುನ ಗುರುದೇವ ಆಶ್ರಮದ ಸಿದ್ಧಪ್ರಸಾದ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರ ಬದುಕಿನಲ್ಲಿ ತಂದೆ-ತಾಯಿಯರ ನಂತರ ಜೀವನ ರೂಪಿಸುವವರು ಗುರುಗಳೇ. ಮೂವತ್ತು ವರ್ಷಗಳ ಬಳಿಕವೂ ಅವರನ್ನು ನೆನಪಿಸಿಕೊಂಡು ಗೌರವಿಸುವುದು ನಿಮ್ಮಲ್ಲಿ ಬೆಳೆದಿರುವ ಸಂಸ್ಕಾರದ ಪ್ರತಿಬಿಂಬವಾಗಿದೆ’ ಎಂದು ಹೇಳಿದರು.

ಶಿಕ್ಷಕರಾದ ಎಸ್.ಬಿ. ಈರಗಾರ, ಎಂ.ಎಚ್. ಪಾಟೀಲ, ಡಿ.ಎನ್. ಪಾಟೀಲ ಹಾಗೂ ಧನ್ಯಕುಮಾರ ಕಾಂಬಳೆ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಎಸ್.ಎ. ಲಕ್ಷ್ಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಾಂತ ಪಟ್ಟೇಕರಿ, ಮಚ್ಛೇಂದ್ರ ಶಿಂದೆ, ಮೆಹಬೂಬ ತರಡೆ, ಧರೆಪ್ಪಾ ಖಿಲಾರೆ, ಆರತಿ ಇನಾಮದಾರ, ನಿರ್ಮಲಾ ರೆಂಟೆ,ಮಲ್ಲಪ್ಪ ಕಸರಡ್ಡಿ, ಶಿವಾನಂದ ಕಲ್ಲಟ್ಟಿ, ದೌಲತರಾವ ಪಾಟೀಲ, ಖಲೀಲ ಮುಲ್ಲಾ, ಅಶೋಕ ಹೊನಮಾನೆ, ಬಸನಗೌಡಾ ಪಾಟೀಲ, ಅನಿಲ ಉಪಾಧ್ಯೆ, ನಾರಾಯಣ ಮಾಂಗ, ಸಂಜು ಚೌಗುಲೆ, ನಿವೃತ್ತಿ ಖೋತ, ವೀರೇಂದ್ರ ಹಿಡಕಲ್, ಗಂಗೂತಾಯಿ ಪೂಜೇರಿ, ಅಖಿಲಾ ಸಗರೆ, ರಂಜನಾ ಜಾಧವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-21-372665070

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.