ಬೆಳಗಾವಿ: ‘ಹೆಣ್ಣು ಅಬಲೆಯಲ್ಲ ಸಬಲೆ. ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆ. ಅವರು ಮಾಡುವ ಕೆಲಸಗಳಿಗೆ ಅಭಿನಂದಿಸಿ ಪ್ರೋತ್ಸಾಹಿಸಬೇಕೆ ಹೊರತು ತಾರತಮ್ಯ ಮಾಡಬಾರದು’ ಎಂದು ಕೀರ್ತಿ ಶಿವಕುಮಾರ್ ಹೇಳಿದರು.

ನಗರದ ಹಿಂದವಾಡಿಯ ಗೊಮ್ಮಟೇಶ್ ವಿದ್ಯಾಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ ಮತ್ತು ಉಮಾ ಸಂಗೀತ ಪ್ರತಿಷ್ಠಾನ ವತಿಯಿಂದ ಈಚೆಗೆ ಆಯೋಜಿಸಲಾದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮನೆಯ ಬೆಳಗುವ ದೀಪ ಹೆಣ್ಣು. ಈ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ಅಸಾಮಾನ್ಯಳು’ ಎಂದರು.

ಸಂಜೀವ ಪಾಟೀಲ, ಆಶ್ರಯ ಫೌಂಡೇಶನ್ ಸಂಸ್ಥಾಪಕಿ ನಾಗರತ್ನ ರಾಮಗೌಡ ಮಾತನಾಡಿದರು. ಲೇಕ್ವ್ಯೂ ಆಸ್ಪತ್ರೆಯ ವೈದ್ಯೆ ಡಾ.ಸಂಗೀತ, ಡಾ.ಸಂಜೀವ್ ಪಾಟೀಲ ದಂಪತಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಲಾಯಿತು. ಚನ್ನಕ್ಕ ಕಾಗತಿಕರ ಮತ್ತು ನೀತಾ ಅಶೋಕ ಕಾಗತಿಕರ್ ಆದರ್ಶ ಅತ್ತೆ– ಸೊಸೆ ಪ್ರಶಸ್ತಿ ಪಡೆದರು.

ವಿದುಷಿ ಸೀಮಾ ಕುಲ್ಕರ್ಣಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಶ್ರಮದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ₹5.52 ಲಕ್ಷದ ಚಕ್ ವಿತರಿಸಲಾಯಿತು. ಆರಾಧನಾ ಸ್ಕೂಲ್ ಮಕ್ಕಳಿಗಾಗಿ ₹5000ದ ಚೆಕ್ ವಿತರಿಸಲಾಯಿತು.

ಅಧ್ಯಕ್ಷೆ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿರತ್ನಪಗೊಳ ಪ್ರಸ್ತಾವಿಕವಾಗಿ ಮಾತನಾಡಿದರು. ತ್ರಿಶಲಾ ಪಾಯಪ್ಪನವರ, ದರ್ಶನ ನಿಲಜಗಿ, ಮಮತಾ ಪತ್ರಾವಳಿ ಪರಚಯಿಸಿದರು. ರೋಹಿಣಿ ಇಂಡಿ, ಡಾ.ರಾಜೇಂದ್ರ ಮಠದ, ಡಾ.ಗುಡಗನಟ್ಟಿ ಇದ್ದರು. ಪುಷ್ಪ ನಿಲಜಗಿ ನಿರೂಪಿಸಿದರು. ಪದ್ಮಜಾ ತುರುಮುಂಡಿ ವಂದಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-21-907547214

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.