ಬೆಳ್ತಂಗಡಿ: ಶಾಲೆಯನ್ನು ಉಳಿಸಿ ಬೆಳೆಸುವ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾಗಿ ಪತ್ರಕರ್ತ ಮನೋಹರ್ ಬಳಂಜ ಪುನರಾಯ್ಕೆಗೊಂಡಿದ್ದಾರೆ.

ಬಳಂಜದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ನಡೆದ ಸಭೆಯಲ್ಲಿ ಟ್ರಸ್ಟ್ನ 2 ವರ್ಷದ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮನೋಹರ್ ಬಳಂಜ, ಉಪಾಧ್ಯಕ್ಷ ರಾಗಿ ವಿನು ಬಳಂಜ, ಕಾರ್ಯ ದರ್ಶಿಯಾಗಿ ರತ್ನರಾಜ ಜೈನ್ ಪೇರಂದಬೈಲು, ಕಾನೂನು ಸಲಹೆಗಾರರಾಗಿ ಸತೀಶ್ ರೈ ಬಾರ್ದಡ್ಕ, ಟ್ರಸ್ಟಿಗಳಾಗಿ ಪ್ರಮೋದ್ ಜೈನ್, ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಶಾಂತ್ ಡಿ. ಬಳಂಜ, ರಾಕೇಶ್ ಹೆಗ್ಡೆ, ಚಂದ್ರಶೇಖರ ಪಿ.ಕೆ., ಪ್ರವೀಣ್ ಎಚ್.ಎಸ್., ಅನಂತರಾಮ್ ಹೊಳ್ಳ, ಸತೀಶ್ ಕೆ., ಅಹ್ವಾನಿತ ಟ್ರಸ್ಟಿಗಳಾಗಿ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷರು, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷರು, ಬಳಂಜ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರನ್ನು ಆಯ್ಕೆಮಾಡಲಾಯಿತು.

ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಸಹಕಾರದೊಂದಿಗೆ ₹15 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ ನಿರ್ಮಾಣ, ಶಾಸಕ ಹರೀಶ್ ಪೂಂಜ ಅವರ ಅನುದಾನದೊಂದಿಗೆ ರಂಗ ಮಂದಿರ ನಿರ್ಮಾಣ, ಉದ್ಯಮಿ ಶೇಖರ ದೇವಾಡಿಗ ಸಹಕಾರದೊಂದಿಗೆ ಚಿಣ್ಣರ ಅಂಗಣ ನಿರ್ಮಾಣ, ಮಕ್ಕಳಿಗೆ ಅನಕೂಲಕ್ಕಾಗಿ ವಾಹನ ವ್ಯವಸ್ಥೆ, ಉಚಿತ ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ, ತರಗತಿ ಕೊಠಡಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಶಾಲೆಗೆ ಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷ ವಿನು ಬಳಂಜ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-51-765798774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.