ಬೇಲೂರು: ‘ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ’ ಎಂದು ಶಂಕರ ಮಠದ ಧರ್ಮಾಧಿಕಾರಿ ವಿಜಯಕೇಶವ ಹೇಳಿದರು.

ಇಲ್ಲಿನ ಶಂಕರಮಠದ ಸಂಭಾಗಣದಲ್ಲಿ ಬ್ರಾಹ್ಮಣ ಮಹಾಸಭಾ ತಾಲ್ಲೂಕು ಘಟಕ ಹಾಗೂ ಬೆಂಗಳೂರಿನ ನಿಮಾನ್ಸ್ನ ‘ನಮನ’ ಯೋಜನೆಯಡಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಹೊಂದಬೇಕು’ ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ರಾಜೀವ್ ಮಾತನಾಡಿ, ‘ದೇಹಕ್ಕೆ ಕಾಯಿಲೆ ಉಂಟಾದರೆ ತಕ್ಷಣ ಚಿಕಿತ್ಸೆ ಕೊಡಿಸುತ್ತೇವೆ. ಆದರೆ ಮಾನಸಿಕ ಆರೋಗ್ಯ ಹದಗೆಟ್ಟಾಗ ಅದನ್ನು ಕಡೆಗಣಿಸುತ್ತೇವೆ. ಮಾನೋವೈದ್ಯರ ಬಳಿ ಹೋದರೆ ಬೇರೆಯವರು ಏನು ತಿಳಿಯುತ್ತಾರೋ ಎಂಬ ಮುಜುಗರ ಬಹಳ ಮಂದಿಯಲ್ಲಿ ಇದೆ. ಒಬ್ಬ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡರೆ ಅದು ಕುಟುಂಬ, ಸಮಾಜ ಹಾಗೂ ದೇಶಕ್ಕೂ ಕೆಡುಕು ಉಂಟಾಗುವ ಸಂಭವ ಇದೆ’ ಎಂದರು.

ಸಂಪನ್ಮೂಲ ವ್ಯಕ್ತಿ ಡಾ. ಶ್ರಾವಂತಿ ಮಾತನಾಡಿ, ‘ನಿತ್ಯ ಜೀವನದಲ್ಲಿ ಮಾನಸಿಕ ಒತ್ತಡಗಳಿಂದ ಸಹಜವಾಗಿ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಇತ್ತೀಚೆಗೆ ಜನರಲ್ಲಿ ಸಂವೇದನಾಶೀಲತೆ ಕಡಿಮೆಯಾಗುತ್ತಿದೆ. ಈ ಒತ್ತಡಗಳನ್ನು ಸಕಾರಾತ್ಮಕ ಚಿಂತನೆಗಳಿಂದ ಶಮನಗೊಳಿಸಿಕೊಂಡು ಹೇಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂಬು ಎಂಬುದನ್ನು ಈ ಕಾರ್ಯಾಗಾರ ತಿಳಿಸಿಕೊಟ್ಟಿದೆ’ ಎಂದು ಹೇಳಿದರು.

ಡಾ. ಜಯಲಕ್ಷ್ಮಿ, ಡಾ. ಮದನ್, ಪ್ರಮುಖರಾದ ಸಾಗರ್ ಮನೋಜ್, ಕೆ.ಆರ್.ಮಂಜುನಾಥ್, ವೇಣುಗೋಪಾಲ್, ನಾಗರಾಜ್, ರಮೇಶ ಆನಂಬಿ, ಕೇಶವ ಹತ್ವಾರ್, ಎಂ.ಜೆ.ಅನಂತಮೂರ್ತಿ, ಸುದರ್ಶನ್ ಶ್ರೀವಿದ್ಯಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-36-1706340562

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.