ಬೇಲೂರು: ‘ದೇವರಿಗೆ ಗೌರವ ಕೊಟ್ಟಷ್ಟೇ ಮಹಿಳೆಯರಿಗೂ ಕೊಟ್ಟಾಗ ಮಾತ್ರ ಪುರುಷರಿಗೆ ಯಶಸ್ಸು ದೊರೆಯುತ್ತದೆ’ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ, ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟೀಯ ಮಹಿಳಾ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಮಹಿಳೆಯರು ರಾಜಕೀಯದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಎಲ್ಲ ಚುನಾವಣೆಗಳಲ್ಲಿ ಶೇ 33 ಮೀಸಲಾತಿ ನೀಡಲು ತಯಾರಿ ನಡೆಯುತ್ತಿದೆ. ಮಹಿಳಾ ನೌಕರರ ಋತುಚಕ್ರ ರಜೆ ಕುರಿತು ಶಾಸನ ಸಭೆಯಲ್ಲಿ ನಾನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೆ’ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಮಂಜುನಾಥ್ ಮಾತನಾಡಿದರು.

ತಹಶೀಲ್ದಾರ್ ಶ್ರೀಧರ್ ಕಂಕನವಾಡಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಕಾರ್ಯದರ್ಶಿ ಲಕ್ಷ್ಮಿಕಾಂತ್, ತಾಲ್ಲೂಕು ಘಟಕದ ಕಾರ್ಯದರ್ಶಿ ಧರ್ಮೇಗೌಡ, ಖಜಾಂಚಿ ಸಂತೋಷ್, ಉಪಾಧ್ಯಕ್ಷ ಪೂರ್ಣೇಶ್, ದಯಾನಂದ್, ತಾ.ಪಂ.ಇಒ ಜಿ.ಎಸ್.ಸತೀಶ್ಕುಮಾರ್, ಬಿಇಒ ಎಸ್.ಭಾಗ್ಯಮ್ಮ, ಶಿಶು ಅಭಿವೃದ್ಧಿ ಅಧಿಕಾರಿ ಎಂ.ಎಸ್.ಇಂಪಾ, ಆರ್ಎಫ್ಒ ಎ.ಎಚ್.ಶೈಲಾ, ಅರೇಹಳ್ಳಿ ಪಿಎಸ್ಐ ಶೋಭಾ, ಉಪ ಖಜಾನಾಧಿಕಾರಿ ಎಂ.ಪಿ.ವೀಣಾ, ಮಕ್ಕಳ ಆರೋಗ್ಯ ತಜ್ಞೆ ಡಾ.ಜಯಲಕ್ಷ್ಮಿನಾಯಕ್, ಪ್ರಾಂಶುಪಾಲೆ ಜಿ.ಕೆ.ವೀಣಾ, ತನುಜ, ವನಿತಾಮಣಿ, ತೇಜಸ್ವಿನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-36-534707983

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.