ಬೆಂಗಳೂರು: ಮಕ್ಕಳ ಬದುಕು ರೂಪಿಸಲು ಪೋಷಕರು ಶ್ರಮಿಸುತ್ತಾರೆ. ಇದನ್ನು ಮನಗಂಡು ಪೋಷಕರ ಮನೋಭಿಲಾಶೆಯಂತೆ ಮಕ್ಕಳು ಉತ್ತಮ ಬದುಕು ರೂಪಿಸಿಕೊಳ್ಳಬೇಕುಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಬಮೂಲ್ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಮತ್ತು ಸಿಬ್ಬಂದಿಯ ಸುಮಾರು 500 ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ಚೆಕ್ ವಿತರಿಸಿ ಮಾತನಾಡಿದರು.

‘ಮಕ್ಕಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೀಳಿಗೆ ಒಳಗಾಗಿದ್ದು, ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪೋಷಕರು ಯಾರ ಹಿತಕ್ಕಾಗಿ ಕಷ್ಟ ಪಡುತ್ತಿದ್ದಾರೆ ಎಂಬುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಸೋತ ಕಾರಣಕ್ಕಾಗಿ ಬಮೂಲ್ ಅಧ್ಯಕ್ಷನಾಗಿಲ್ಲ. ಬದುಕಿನಲ್ಲಿ ಸೋಲು–ಗೆಲುವು ಇರುತ್ತದೆ. ಗೆಲುವಿಗಿಂತ ಸೋಲಿನಿಂದಲೇ ಹೆಚ್ಚು ಪಾಠ ಕಲಿಯುವುದಿದೆ. ನಷ್ಟದಲ್ಲಿದ್ದ ಬಮೂಲ್ ಸಂಸ್ಥೆಯನ್ನು ಎಲ್ಲಾ ನಿರ್ದೇಶಕರ ಸಲಹೆ, ಸಹಕಾರದೊಂದಿಗೆ ಲಾಭದಲ್ಲಿ ನಡೆಯುವಂತೆ ಮಾಡಿದ್ದೇವೆ’ ಎಂದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಹೈನುಗಾರಿಕೆ ಅತ್ಯಂತ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಒಬ್ಬ ಕೃಷಿಕನಾಗಿ ಹತ್ತಾರು ಹಸುಗಳನ್ನು ಸಾಕುತ್ತಿದ್ದೇನೆ’ ಎಂದರು.

ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ ಮಾತನಾಡಿ, ರೈತರಿಗೆ ಹಸು ಖರೀದಿಗೆ, ಶೆಡ್ ನಿರ್ಮಾಣಕ್ಕೆ ಸಾಲ, ಆರ್ಥಿಕ ನೆರವು ನೀಡಿದ್ದೇವೆ ಎಂದರು.

ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಎಂಟು ಜನ ಗಣ್ಯರನ್ನು ಸನ್ಮಾನಿಸಲಾಯಿತು.

ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಉಪಾಧ್ಯಕ್ಷ ಡಾ.ರಾಜಣ್ಣ, ನಿರ್ದೇಶಕರಾದ ಬಿ.ಸಿ.ಆನಂದ್ ಕುಮಾರ್, ಆರ್.ಕೆ.ರಮೇಶ್, ಎಚ್.ಎನ್. ಅಶೋಕ್, ಎಸ್.ಲಿಂಗೇಶ್ ಕುಮಾರ್, ಎಚ್.ಎಸ್.ಹರೀಶ್ ಕುಮಾರ್, ಬೈರೇಗೌಡ, ಬಿ.ವಿ.ಸತೀಶ್ ಗೌಡ, ಎಸ್.ಪಿ. ಮುನಿರಾಜು, ರಾಜಾನುಕುಂಟೆ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಪ್ರಸನ್ನ ವಿ.ಪಿ. ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-4-1555563359

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.