ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಪ್ರಯೋಗಾಲಯ ಪ್ರಾರಂಭಿಸಲಾಗುವುದು ಎಂದು ಕುಲಪತಿ ಪ್ರೊ.ಬಿ.ರಮೇಶ್ ಹೇಳಿದರು.

ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಇನ್ನೋವೆಕ್ಸ್-2.0’ ತಂತ್ರಜ್ಞಾನ ಕೌಶಲ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೈಬರ್ ಭದ್ರತೆ ಮತ್ತು ಬಯೋ ಇನ್ಫರ್ಮೆಟಿಕ್ಸ್ ವಿಷಯಗಳಲ್ಲಿ ಡಿಪ್ಲೊಮಾ ಕೋರ್ಸ್ ಆರಂಭಿಸಲಾಗುವುದು ಎಂದರು.

ಅತಿಥಿಗಳಾದ ವರದರಾಜನ್ ಕೃಷ್ಣ, ಡಾ.ಜ್ಞಾನವೇಲ್ ಮುತ್ತರಸು, ಪವನ್ ಕುಮಾರ್ ಮತ್ತು ಡಾ.ಬಿ.ಆರ್.ಸುಪ್ರೀತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಅನ್ವೇಷಣಾತ್ಮಕ ಮತ್ತು ಸೃಜನಶೀಲ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು.

ಶಿಕ್ಷಣವನ್ನು ಕೇವಲ ಪದವಿ ಗಳಿಕೆಗೆ ಸೀಮಿತಗೊಳಿಸದೆ ತರಗತಿ ಕೋಣೆಗಳನ್ನು ತಾಂತ್ರಿಕ ಕೌಶಲ ತರಬೇತಿಯ ಪ್ರಯೋಗಾಲಯವಾಗಿ ಪರಿವರ್ತಿಸಿಕೊಳ್ಳಬೇಕು. ಸ್ಟಾರ್ಟ್ಅಪ್ ಉದ್ಯಮಗಳ ಆರಂಭಕ್ಕೆ ಅಗತ್ಯವಾದ ಅನುಭವ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಮೇಧಾ ಇಟಗಿ ಹುಯಿಲಗೋಳ ಅವರು ಮೇಳದ ಉದ್ದೇಶವನ್ನು ವಿವರಿಸಿದರು. ಉಪನ್ಯಾಸಕಿ ನಿಖಿತಾ ನಿರೂಪಿಸಿದರು. ಜ್ಞಾನಾಕ್ಷಿ ಕತ್ತಿ ಸ್ವಾಗತಿಸಿ, ಸುಷ್ಮಾ ವಂದಿಸಿದರು.

ಎರಡು ದಿನಗಳ 'ಇನ್ನೋವೆಕ್ಸ್ -2.0' ಕೌಶಲ ಮೇಳದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವೆಬ್ ವಿನ್ಯಾಸ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ, ಕಿರುಚಿತ್ರ ನಿರ್ಮಾಣ, ಸ್ಟಾರ್ಟ್ ಅಪ್ ಪಿಚ್, ಗೇಮಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-4-254098546

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.