ಬೆಂಗಳೂರು: ‘ಭಾರತದ ಭವಿಷ್ಯ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರ ಧಾರೆಗಳ ಮೇಲೆ ನಿಂತಿದೆ’ ಎಂದು ನಾಟಕಕಾರ ಕೆ.ವೈ. ನಾರಾಯಣಸ್ವಾಮಿ ಹೇಳಿದರು.

ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಾಥಮಿಕ ಶಿಕ್ಷಣದ ಪಠ್ಯಕ್ರಮ ದಲ್ಲಿಯೇ ಅಂಬೇಡ್ಕರ್ ಅವರ ವಿಚಾರಗಳನ್ನು ಮನಮುಟ್ಟುವಂತೆ ರೂಪಿಸ ಬೇಕು ’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಬಿ.ಸಿ. ನಾಗೇಂದ್ರಕುಮಾರ್ ಮಾತನಾಡಿ,‘ಕೆ.ವೈ. ನಾರಾಯಣಸ್ವಾಮಿ ಅವರು ವರ್ಣ ಪಲ್ಲಟ ನಾಟಕದಲ್ಲಿ ಅಂಬೇಡ್ಕರರ ವಿಚಾರಧಾರೆಗಳನ್ನು ಕಲಾತ್ಮಕವಾಗಿ ಪ್ರಸ್ತುತಪಡಿಸಿದ್ದಾರೆ’ ಎಂದು ತಿಳಿಸಿದರು.

ಅನಾವರಣ ತಂಡ ಶಶಿಧರ್ ಭಾರಿಘಾಟ್ನ ನಿರ್ದೇಶನದಲ್ಲಿ ಕೆ.ವೈ. ನಾರಾ ಯಣಸ್ವಾಮಿ ಅವರು ರಚಿಸಿದ ವರ್ಣ ಪಲ್ಲಟ ನಾಟಕವನ್ನು ಪ್ರಸ್ತುತಪಡಿಸಿದರು.

ಕಾಲೇಜಿನ ಕನ್ನಡ ಸಂಘದ ಸಂಚಾಲಕ ರುದ್ರೇಶ್ ಅದರಂಗಿ, ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಚಲುವರಾಜು, ಐಕ್ಯುಎಸಿ ಸಂಚಾಲಕ ನಾಗೇಶ ಜಿ., ಕೆಜಿಸಿಟಿಎ ಕಾರ್ಯದರ್ಶಿ ನಾರಾಯಣ ಎಚ್.ಜಿ., ಅಧ್ಯಾಪಕರಾದ ನಾಜಿಯ ಒಬೇದ್, ಸುಮಾ ಡಿ. ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-4-325093221

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.