ಬೆಂಗಳೂರು: ‘ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಎರಡನೇ ವಾರ್ಷಿಕ ಘಟಿಕೋತ್ಸವವು ಇದೇ 27ರ ಸೋಮವಾರ ನಡೆಯಲಿದೆ’ ಎಂದು ಕುಲಪತಿ ಪ್ರೊ.ವಿಶ್ವನಾಥ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟಿಕೋತ್ಸವದಲ್ಲಿ ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 17 ವಿದ್ಯಾರ್ಥಿಗಳಿಗೆ ರ್ಯಾಂಕ್ ಸೇರಿ ಒಟ್ಟು 171 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಪದವಿ ಪ್ರದಾನವಾದ ತಕ್ಷಣವೇ ಅಂಕಪಟ್ಟಿಗಳನ್ನು ನ್ಯಾಡ್ನಲ್ಲಿ (ಎನ್ಎಡಿ) ಅಪ್ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಅಲ್ಲಿಂದಲೇ ಅಂಕಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಘಟಿಕೋತ್ಸವ ಉದ್ಘಾಟಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಯೋಜನಾ ಆಯೋಗದ ಮಾಜಿ ಸದಸ್ಯ ಪ್ರೊ.ಬಿ.ಎಲ್.ಮುಂಗೇಕರ್ ಅವರು ಭಾಗಿಯಾಗಲಿದ್ದಾರೆ.

‘ಆರು ನೂತನ ಕೋರ್ಸ್’: ‘ಗಣಿತ ಮತ್ತು ಅರ್ಥಶಾಸ್ತ್ರ ಸಂಯೋಜನೆಯ ಕೋರ್ಸ್ಗಳು ರಾಜ್ಯದಲ್ಲಿ ಇಲ್ಲ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶಾ ವಕಾಶ ಕಷ್ಟವಾಗಿತ್ತು. ಇದನ್ನು ನಿವಾರಿಸಲು ಆರು ಹೊಸ ಕೋರ್ಸ್ಗಳನ್ನು ಆರಂಭಿಸುತ್ತಿದ್ದೇವೆ’ ಎಂದು ಪ್ರೊ.ವಿಶ್ವನಾಥ ಅವರು ಹೇಳಿದರು.

‘ಮೂರು ವರ್ಷಗಳ ಬಿ.ಎಸ್ಸಿ ಡೇಟಾ ಅನಾಲಿಟಿಕ್ಸ್, ಎರಡು ವರ್ಷಗಳ ಎಂ.ಎಸ್ಸಿ ಡೇಟಾ ಅನಾಲಿಟಿಕ್ಸ್, ಐದು ವರ್ಷಗಳ ಸಂಯೋಜಿತ ಎಂ.ಎ ಅರ್ಥಶಾಸ್ತ್ರ, ಎರಡು ವರ್ಷಗಳ ಎಂ.ಎ ಅರ್ಥಶಾಸ್ತ್ರ, ಎಂ.ಎಸ್ಸಿ ಅಭಿವೃದ್ಧಿ ಅರ್ಥಶಾಸ್ತ್ರ ಮತ್ತು ಎಂ.ಎಸ್ಸಿ ಸಾರ್ವಜನಿಕ ನೀತಿ ಕೋರ್ಸ್ಗಳನ್ನು 2026–27ನೇ ಸಾಲಿನಿಂದ ನೂತನವಾಗಿ ಆರಂಭಿಸಲಾಗುತ್ತಿದೆ’ ಎಂದರು.

ಚಿನ್ನದ ಪದಕ ಪಡೆದವರು: 5 ವರ್ಷಗಳ ಸಂಯೋಜಿತ ಎಂ.ಎಸ್ಸಿ ಕೋರ್ಸ್ನಲ್ಲಿ ಮೇಘನಾ ಬಿ.ಪ್ರಸೀದ್, ಪಾರ್ವತಿ ಜೆ., ಎರಡು ವರ್ಷಗಳ ಎಂ.ಎಸ್ಸಿ ಅರ್ಥಶಾಸ್ತ್ರದಲ್ಲಿ ಗೌರಿ ಅಗರ್ವಾಲ್, ದಿವ್ಯಾ.ಯು, ಹಣಕಾಸು ಅರ್ಥಶಾಸ್ತ್ರದಲ್ಲಿ ಎಂ.ನೇಹಾ ಮತ್ತು ಪ್ರಿಯಾಂಶು ಶೇಖರ್ ಚಿನ್ನದ ಪದಕ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಕುಲಸಚಿವೆ ಮಮತಾದೇವಿ ಜಿ.ಎಸ್., ಪರೀಕ್ಷಾ ನಿಯಂತ್ರಕ (ಪ್ರಭಾರ) ಮಹಮ್ಮದ್ ಶಮೀರ್ ಕೆ. ಮತ್ತು ಹಣಕಾಸು ಅಧಿಕಾರಿ ಎಂ.ವಿ.ಪ್ರಶಾಂತ್ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-4-831814532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.