ಬೆಂಗಳೂರು: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ (ಎಪಿಯು) ಇತ್ತೀಚೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಡೆಸಿದ ದಾಳಿ ಯನ್ನು ಖಂಡಿಸಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಧು ಭೂಷಣ್, ‘ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸ್ಪಾರ್ಕ್–ಎಪಿಯು ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ‘ರೀಡಿಂಗ್ ಸರ್ಕಲ್’ ಕಾರ್ಯಕ್ರಮ ವಿರೋಧಿಸಿ, ಎಬಿವಿಪಿಯ 20 ಜನರ ಗುಂಪೊಂದು ವಿ.ವಿ ಕ್ಯಾಂಪಸ್ಗೆ ನುಗ್ಗಿ ದಾಳಿ ನಡೆಸಿತ್ತು. ಕುನಾನ್–ಪೋಶ್ಪೋರಾ ದೌರ್ಜನ್ಯ ಮತ್ತು ಭಾರತೀಯ ಸೇನೆಯ ಸಾಮೂಹಿಕ ಅತ್ಯಾಚಾರದ ಕುರಿತು ಆ ಕಾರ್ಯ ಕ್ರಮ ಕೇಂದ್ರೀಕೃತವಾಗಿತ್ತು. ದೇಶ ವಿರೋಧಿ ಕಾರ್ಯಕ್ರಮವೆಂದು ಬಿಂಬಿಸಿ, ದಾಳಿ ನಡೆಸಿರುವುದು ಖಂಡನೀಯ. ಈ ಘಟನೆಯ ಸತ್ಯಾಸತ್ಯತೆ ತಿಳಿಯಲು ವಿವಿಧ ನಾಗರಿಕ ಸಂಘಟನೆಗಳ ಕಾರ್ಯಕರ್ತರ ತಂಡವು ಸಂಬಂಧ ಪಟ್ಟವರಿಂದ ಮಾಹಿತಿ ಕಲೆ ಹಾಕಿ, ವರದಿ ತಯಾರಿಸಿದೆ’ ಎಂದು ಹೇಳಿದರು.

‘ದಾಳಿ ನಡೆಯುವುದು ಮೊದಲೇ ತಿಳಿದಿದ್ದರೂ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸೂಕ್ತ ಕ್ರಮಕೈಗೊಳ್ಳಲು ವಿಫಲವಾಗಿದೆ. ಈ ಪ್ರಕರಣದಲ್ಲಿ ಎಬಿವಿಪಿಯನ್ನು ಹೊಣೆಗಾರರನ್ನಾಗಿ ಮಾಡಲು ಎಪಿಯು ವಿಫಲವಾಗಿದೆ. ಬದಲಾಗಿ ತನ್ನದೇ ವಿದ್ಯಾರ್ಥಿಗಳನ್ನು ದಂಡನೆಗೆ ಗುರಿಯಾಗಿಸಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಜತೆಗೆ ಮಾತನಾಡಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ’ ಎಂದು ದೂರಿದರು.

‘ಬಹುತ್ವ ಕರ್ನಾಟಕ’ದ ಮೋಹನ್ ರಾವ್ ಮಾತನಾಡಿ, ‘ಈ ಪ್ರಕರಣದಲ್ಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಿದೆ. ಇದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ. ಕೂಡಲೇ ಈ ಅಮಾನತು ರದ್ದುಗೊಳಿಸಬೇಕು. ವಿದ್ಯಾರ್ಥಿ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ತೆಗೆಯಬೇಕು. ಸ್ಪಾರ್ಕ್–ಎಪಿಯು ವಿರುದ್ಧದ ಪ್ರಕರಣವನ್ನು ಪೊಲೀಸರು ರದ್ದು ಮಾಡಿ, ಎಬಿವಿಪಿ ಗುಂಪಿನ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಿಕ್ಷಣ ತಜ್ಞ ಸುವ್ರತ್ ರಾಜು, ಪಿಯುಸಿಎಲ್–ಕರ್ನಾಟಕದ ಅಧ್ಯಕ್ಷ ಅರವಿಂದ್ ನರೈನ್, ಎಐಎಲ್ಎಜೆ–ಕರ್ನಾಟಕದ ಮಧುಲಿಕಾ ಟಿ. ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-1660491530

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.