ಬೆಂಗಳೂರು: ‘ಹವಾಮಾನ ವೈಪರಿತ್ಯದ ಅಪಾಯಗಳ ಜತೆಗೆ ಆರ್ಥಿಕತೆ ಮೇಲೆ ಆಗಲಿರುವ ಪರಿಣಾಮಗಳ ಅಧ್ಯಯನಕ್ಕೆ ಭಾರತವು ಸಹಭಾಗಿತ್ವ ಕಾರ್ಯಕ್ರಮ ರೂಪಿಸಿ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ’ ಎಂದು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯೂನಿವರ್ಸಿಟಿಯ ಕುಲಪತಿ ಕೆ.ವಿಶ್ವನಾಥ ಸಲಹೆ ನೀಡಿದರು.

ವಿಶ್ವವಿದ್ಯಾಲಯಲ್ಲಿ ಈಚೆಗೆ ಆಯೋಜಿಸಿದ್ದ ಹವಾಮಾನ ವೈಪರಿತ್ಯದ ಅಪಾಯ, ವಹಿವಾಟು ಸ್ಥಿತಿ ಸ್ಥಾಪಕತ್ವ ಹಾಗೂ ಸುಸ್ಥಿರ ಪ್ರಾದೇಶಿಕ ಅಭಿವೃದ್ದಿ ಕುರಿತ ಶೈಕ್ಷಣಿಕ ಉದ್ಯಮ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಮಳೆ ವ್ಯತ್ಯಾಸಗಳನ್ನು ನೋಡುತ್ತಿದ್ದೇವೆ. ಒಂದು ಪ್ರದೇಶದಲ್ಲಿ ವ್ಯಾಪಕ ಮಳೆಯಾದರೆ, ಇನ್ನೊಂದು ಕಡೆ ಬರ ಇರಲಿದೆ. ಇದು ಕೃಷಿ ಆರ್ಥಿಕತೆ ಮೇಲೂ ಹೊಡೆತ ಬೀಳುತ್ತಿದೆ’ ಎಂದು ತಿಳಿಸಿದರು.

ಬ್ರಿಟನ್ನ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ‘ಭಾರತ ಹಾಗೂ ಬ್ರಿಟನ್ನ ಪ್ರಧಾನಮಂತ್ರಿಗಳು ಕಳೆದ ವರ್ಷ ಭೇಟಿಯಾದಾಗ ಉಭಯ ದೇಶಗಳ ಹತ್ತು ವರ್ಷದ ಸಹಭಾಗಿತ್ವ ಚಟುವಟಿಕೆಗಳ ಕುರಿತು ಒತ್ತು ನೀಡಿದ್ದಾರೆ. ಹವಾಮಾನ ವೈಪರಿತ್ಯವೂ ಪ್ರಮುಖ ವಿಚಾರವಾಗಿದ್ದು, ಇದರ ಮೇಲೂ ಶೈಕ್ಷಣಿಕ ಹಾಗೂ ಉದ್ಯಮ ವಲಯ ಗಮನ ಹರಿಸಬೇಕಾಗಿದೆ. ಶುದ್ಧ ಇಂಧನ ಕ್ಲಸ್ಟರ್ ಕೂಡ ಪ್ರಮುಖ ಆದ್ಯತೆ ಆಗಬೇಕು’ ಎಂದು ಹೇಳಿದರು.

ಬ್ರಿಟನ್ನ ಅಬೆರಿಸ್ಟ್ವೈತ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹೋಮಾಗ್ನಿ ಚೌಧರಿ ಮಾತನಾಡಿ, ‘ಕರ್ನಾಟಕದ ಜನತೆ ಕೆಲವು ದಿನಗಳಿಂದ ಹವಾಮಾನ ಬದಲಾವಣೆಯ ಪರಿಣಾಮ ಅನುಭವಿಸುವಂತಾಗಿದೆ. ನಗರೀಕರಣದ ಪ್ರಭಾವವೂ ಇದರ ಹಿಂದೆ ಇದೆ. ಭವಿಷ್ಯದಲ್ಲಿ ಇದನ್ನು ಎದುರಿಸಲು ನೀತಿ ನಿರೂಪಕರು, ಶೈಕ್ಷಣಿಕ ತಜ್ಞರು, ಸಂಶೋಧನೆ ಕ್ಷೇತ್ರದಲ್ಲಿ ನಿರತರಾದವರು, ಉದ್ಯಮ ವಲಯದವರನ್ನು ಒಟ್ಟುಗೂಡಿಸಿ ಬೆಳಕು ಚೆಲ್ಲುವ ಅಗತ್ಯವಿದೆ’ ಎಂದರು.

ವಿಶ್ವವಿದ್ಯಾಲಯ ಕುಲಸಚಿವೆ ಜಿ.ಎಸ್. ಮಮತಾ ದೇವಿ, ಹಣಕಾಸು ಅಧಿಕಾರಿ ಎಂ.ವಿ. ಪ್ರಶಾಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-4-2138188696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.