ಬೆಂಗಳೂರು: ‘ದೇಶದಲ್ಲಿನ ಬಹುತೇಕ ಅಂಗವಿಕಲರು ಬಡತನ ರೇಖೆಗಿಂತ ಕೆಳಗೆ ಬದುಕುತ್ತಿದ್ದು ಅವರ ಸಬಲೀಕರಣಕ್ಕೆಸರ್ಕಾರ ಮತ್ತು ಸಮಾಜ ಅಗತ್ಯ ನೆರವು ನೀಡಬೇಕು’ ಎಂದು ಸಮರ್ಥನಂ ಇಂಟರ್ ನ್ಯಾಷನಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಜಿ.ಕೆ. ಮಹಾಂತೇಶ್ ತಿಳಿಸಿದರು.

ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗವು ಅಂಗವಿಕಲರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದರು.

‘ವಿಶ್ವದ ಜನಸಂಖ್ಯೆಯ ಶೇ 15ರಷ್ಟುಮಂದಿ ವಿವಿಧ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಉನ್ನತ ಶಿಕ್ಷಣದ ಹಂತದಲ್ಲಿ ಅಂಗವಿಕಲರ ಸಂಖ್ಯೆ ಅತ್ಯಲ್ಪವಾಗಿದ್ದು, ಉದ್ಯೋಗದಲ್ಲೂ ಅವಕಾಶಗಳಿಂದ ವಂಚಿತರಾಗಿದ್ದಾರೆ’ ಎಂದರು.

‘ಅಂಗವಿಕಲರೂ ತೆರಿಗೆ ಪಾವತಿಸುವವರಾಗಿ ಪರಿವರ್ತನೆಯಾಗಬೇಕು. ಸಮರ್ಥನಂ ಟ್ರಸ್ಟ್ ಸಿಎಸ್ಆರ್ ನಿಧಿಯ ಬೆಂಬಲದಿಂದ ಕರ್ನಾಟಕ ಸೇರಿ ಅನೇಕರಾಜ್ಯಗಳಲ್ಲಿ ಅಂಗವಿಕಲರಿಗೆ ನೆರವು ಒದಗಿಸುತ್ತಿದೆ’ ಎಂದು ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿದ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ‘ಅಂಗವಿಕಲರ ಜೀವನಮಟ್ಟ ಸುಧಾರಣೆಗೆ ಉತ್ತೇಜನ ನೀಡಲಾಗುವುದು’ ಎಂದರು.

ಅಂಗವಿಕಲರ ಪುನರ್ವಸತಿ ಮತ್ತು ಸಂಶೋಧನಾ ಸಂಸ್ಥೆಯ ಪ್ರತಿನಿಧಿ ಎನ್.ಎಸ್.ಸೆಂಥಿಲ್ ಕುಮಾರ್, ನಿಮ್ಹಾನ್ಸ್ ನಿವೃತ್ತ ಪ್ರಾಧ್ಯಾಪಕ ಐ.ಎ. ಷರೀಫ್, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವೈ.ಎಸ್.ಸಿದ್ದೇಗೌಡ, ಕುಲಪತಿ ಬಿ.ರಮೇಶ್, ಕುಲಸಚಿವರಾದ ಎ.ನವೀನ್ ಜೋಸೆಫ್, ರಮೇಶ.ಬಿ.ಕುಡೇನಟ್ಟಿ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ರಿತಿಕಾ ಸಿನ್ಹಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-4-2103092923

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.