ಬೆಂಗಳೂರು: ಶಾಲೆ ಮತ್ತು ಮನೆಯಲ್ಲಿ ಮಕ್ಕಳಿಗೆ ವಿದ್ಯೆಯ ಜತೆಗೆ ವಿವೇಕ ಕಲಿಸಬೇಕು. ಮತ್ತೊಬ್ಬರ ಸಂಕಷ್ಟಕ್ಕೆ ಮಿಡಿಯುವ ಗುಣ ಕಲಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ರಾಜಾಜಿನಗರದಲ್ಲಿರುವ ಕೆಎಲ್ಇ ಸಂಸ್ಥೆಯ ಸಿಬಿಎಸ್ಇ ಆಂಗ್ಲ ಮಾಧ್ಯಮ ಶಾಲೆಗೆ ಕೆ.ಎಫ್. ಪಾಟೀಲ ಎಂದು ನಾಮಕರಣ ಮಾಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಹೆಚ್ಚು ಅಂಕ ಗಳಿಸುವಂತೆ ಮಕ್ಕಳ ಮೇಲೆ ಪೋಷಕರು ಒತ್ತಡ ಹೇರಬಾರದು. ಅಂಕ ಗಳಿಕೆಯೇ ಜೀವನವಲ್ಲ. ಅದರ ಆಚೆಗೂ ಬದುಕು ಇದೆ ಎಂಬುದನ್ನು ಹೇಳಬೇಕು. ಕೆಲವೊಮ್ಮೆ ಪೋಷಕರು ಮೃತಪಟ್ಟಾಗ ಅಂತ್ಯಕ್ರಿಯೆಗೂ ಬಾರದ ಮಕ್ಕಳನ್ನು ನೋಡಿದ್ದೇವೆ. ಮಕ್ಕಳಲ್ಲಿ ಉತ್ತಮ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಬೆಳೆಸುವ ಅಗತ್ಯತೆ ಇದೆ ಎಂದರು.

ಇತಿಹಾಸದಲ್ಲಿ ಕೆಲವರು ತಮ್ಮ ಸಮಾಜಮುಖಿಯಾದ ಸೇವೆಯಿಂದ ಅಜರಾಮರವಾಗಿ ಉಳಿಯುತ್ತಾರೆ. ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ ರಾಜಕೀಯ ಈ ಎಲ್ಲ ನೆಲೆಗಳಲ್ಲಿ ಬಹು ಮೌಲಿಕವಾದ ಸೇವೆ ನೀಡಿ ಅಮರರಾದವರು ಕೆ.ಎಫ್. ಪಾಟೀಲರು. 1905ರಲ್ಲಿ ಜನಿಸಿದ ಕೆ. ಎಫ್. ಪಾಟೀಲರು ಶಾಸಕರಾಗಿ, ಸಚಿವರಾಗಿ ರಾಜಕೀಯವಾಗಿ ಸಾಕಷ್ಟು ಬೆಳೆದಿದ್ದರು. ರಾಜಕೀಯ ತ್ಯಜಿಸಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ಸ್ಥಾಪಿಸಿದರು. ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟರು ಎಂದು ತಿಳಿಸಿದರು.

ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಎಂ. ಲಮಾಣಿ, ಸಮರ್ಪಿತ ಸೇವೆ ಮತ್ತು ಉದಾರತೆಯ ಮೂಲಕ ಅನೇಕರಿಗೆ ಪ್ರೇರಣೆಯಾಗಿದ್ದ ಮಹಾನ್ ನಾಯಕ ಕೆ. ಎಫ್. ಪಾಟೀಲರು ಎಂದು ಬಣ್ಣಿಸಿದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರಭಾಕರ ಕೋರೆ ಮಾತನಾಡಿ, ಮುಂಬೈ–ಕರ್ನಾಟಕ ಭಾಗದಲ್ಲಿಶಿಕ್ಷಣದ ಬೆಳವಣಿಗೆಗೆ ದಾನಿಗಳ ಕೊಡುಗೆಅಪಾರವಾಗಿದೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಸರ್ ಸಿದ್ದಪ್ಪ ಕಂಬಳಿ ಹಾಗೂ ದಾನಿ ಕೆ. ಎಫ್. ಪಾಟೀಲರು ಪ್ರಮುಖರಾಗಿದ್ದಾರೆ. ಅವರ ಹೆಸರು ಬೆಂಗಳೂರಿನ ಭಾಗದಲ್ಲಿಯೂ ಅಜರಾಮರವಾಗಿ ಉಳಿಯಬೇಕೆಂಬ ಸದುದ್ದೇಶದಿಂದಲೇ ಕೆಎಲ್ಇ ಸಂಸ್ಥೆಯು ಅವರ ಹೆಸರನ್ನು ಈ ಶಾಲೆಗೆ ನಾಮಕರಣ ಮಾಡಿದೆ ಎಂದು ಹೇಳಿದರು.

ಇದೇ ವೇಳೆ, ಕೆ.ಎಫ್.ಪಾಟೀಲರ ಪುತ್ರಿ, ಚಲನಚಿತ್ರ ನಿರ್ಮಾಪಕಿ ಅರುಣರಾಜೇ ಪಾಟೀಲ ಅವರು ಬರೆದಿರುವ ‘ಕರ್ಮಯೋಗಿ ಕೆ.ಎಫ್.ಪಾಟೀಲ’ ಪುಸ್ತಕವನ್ನು ಜನಾರ್ಪಣೆ ಮಾಡಲಾಯಿತು ಹಾಗೂ ಅವರ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಎಸ್. ಕೌಜಲಗಿ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್ ಪಿ. ಕೋರೆ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಯಶವಂತ್ ಗುರ್ಕಾ, ಶಾಲೆಯ ಪ್ರಾಂಶುಪಾಲೆ ಶರ್ಮಿಸ್ಟಾ ರಾಯ್, ಕೆಎಲ್ಇ ಉಪಾಧ್ಯಕ್ಷ ಬಸವರಾಜ ತಟವಟಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-4-1802831914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.