ಬೆಂಗಳೂರು: ‘ದೇಶದಲ್ಲಿ ಹೋಮಿಯೋಪಥಿ ಒಂದು ಶಕ್ತಿಶಾಲಿ ಮತ್ತು ಜನಪ್ರಿಯ ವೈದ್ಯಕೀಯ ಪದ್ಧತಿಯಾಗಿ ಗುರುತಿಸಿಕೊಳ್ಳುತ್ತಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.

ಹೋಮಿಯೋಪಥಿ ಫೌಂಡೇಷನ್ ಸಹಯೋಗದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಗರದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹೋಮಿಯೋಪಥಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಲಕ್ಷಾಂತರ ಜನರು ಈ ಪದ್ಧತಿಯ ಪ್ರಯೋಜನ ಪಡೆಯುತ್ತಿದ್ದಾರೆ. ಆಯುಷ್ ಸಚಿವಾಲಯವು ಅಗತ್ಯ ಪ್ರೋತ್ಸಾಹ ನೀಡುತ್ತಿದೆ. ರಾಜ್ಯದಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯಶಿಕ್ಷಣ, ಸಮರ್ಪಿತ ವೈದ್ಯರು ಮತ್ತು ಸಂಶೋಧನೆಯಿಂದಾಗಿ ಹೋಮಿಯೋಪಥಿ ವಿಧಾನವು ಬೆಳವಣಿಗೆ ಹೊಂದುತ್ತಿದೆ’ ಎಂದರು.

‘ವೈದ್ಯಕೀಯ ವಿಜ್ಞಾನವು ಬಹಳ ಮುಂದುವರಿದಿದ್ದರೂ, ಜೀವನಶೈಲಿ ಆಧಾರಿತ ಕಾಯಿಲೆಗಳು, ಮಾನಸಿಕ ಒತ್ತಡ ಮತ್ತು ದೀರ್ಘಕಾಲದ ಕಾಯಿಲೆಗಳು ಹೆಚ್ಚುತ್ತಿವೆ. ಈ ಸಮಯದಲ್ಲಿ, ಹೋಮಿಯೋಪಥಿಯ ಸಮಗ್ರ ಚಿಕಿತ್ಸಾ ವಿಧಾನವು ಸಮತೋಲಿತ ಮತ್ತು ಶಾಶ್ವತ ಆರೋಗ್ಯದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ’ ಎಂದರು.

ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ., ‘ರೋಗಕ್ಕೆ ಚಿಕಿತ್ಸೆಯನ್ನು ಮಾತ್ರ ನೀಡದೆ, ಅದರ ಮೂಲಹುಡುಕುವ ಕೆಲಸವನ್ನು ಹೋಮಿಯೋಪಥಿ ಮಾಡುತ್ತದೆ. ಹೀಗಾಗಿ, ಈ ಚಿಕಿತ್ಸಾ ಪದ್ಧತಿಯಲ್ಲಿ ಶಿಕ್ಷಣವನ್ನು ಬಲಪಡಿಸುವುದು ಹಾಗೂ ಅದನ್ನು ಮುಖ್ಯ ಆರೋಗ್ಯ ವ್ಯವಸ್ಥೆಯೊಂದಿಗೆ ಜೋಡಿಸುವುದು ವಿಶ್ವವಿದ್ಯಾಲಯದ ಬದ್ಧತೆಯಾಗಿದೆ’ ಎಂದು ಹೇಳಿದರು.

ಕರ್ನಾಟಕ ಹೋಮಿಯೋಪಥಿ ಮಂಡಳಿಯ ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್, ‘ಶೇ 50ರಷ್ಟು ರೋಗಗಳಿಗೆ ಔಷಧಗಳು ಅಗತ್ಯವಿರುವುದಿಲ್ಲ. ಬದಲಾಗಿ, ಪ್ರೀತಿ, ಕಾಳಜಿ, ಸ್ನೇಹ ಮತ್ತು ಕರುಣೆ ಅಗತ್ಯ. ನೂರಾರು ವರ್ಷಗಳ ನಂತರವೂ ಹೋಮಿಯೋಪಥಿ ಇಂದು ನಮ್ಮ ನಡುವೆ ಇದ್ದು, ಭಾರತದ ಬಹು ನಂಬಿಕೆಯ ವೈದ್ಯಪದ್ಧತಿಯಾಗಿ ನಮ್ಮನ್ನು ಕಾಯುತ್ತಿದೆ’ ಎಂದರು. ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ವಿಶ್ವವಿದ್ಯಾಲಯದ ಕುಲಸಚಿವ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವ ಡಾ. ರಿಯಾಜ್ ಭಾಷ ಎಸ್., ಹಣಕಾಸು ಅಧಿಕಾರಿ ಬಿ.ಕೆ. ಗಂಗಾಧರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-4-96942670

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.