ಬೆಂಗಳೂರು: ಆಧುನಿಕ ಯುಗಕ್ಕೆ ತೆರೆದುಕೊಳ್ಳಲು ಹಾಗೂ ಲೇಖಕಿಯರ ಜತೆಗೆ ಡಿಜಿಟಲ್ ವೇದಿಕೆಯ ನೆರವಿನಲ್ಲಿ ಸಂಪರ್ಕ ಸಾಧಿಸಲು ಕರ್ನಾಟಕ ಲೇಖಕಿಯರ ಸಂಘವು (ಕಲೇಸಂ) ನೂತನ ವೆಬ್ಸೈಟ್ ರೂಪಿಸಿದೆ.

ಸಂಘವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2024 ಮತ್ತು 2025ನೇ ಸಾಲಿನ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವೆಬ್ಸೈಟ್ ಜನಾರ್ಪಣೆಗೊಂಡಿತು.

ವೆಬ್ಸೈಟ್ ಉದ್ದೇಶದ ಬಗ್ಗೆ ತಿಳಿಸಿದ ಲೇಖಕಿ ಜಯಲಕ್ಷ್ಮಿ ಪಾಟೀಲ, ‘ಇನ್ನುಮುಂದೆ ಅಂಗೈನಲ್ಲಿ ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆಯಲಿದೆ. ಸಂಘ ಹೊರತರುವ ತ್ರೈಮಾಸಿಕ ಸಂಚಿಕೆಯು ಅಂಚೆ ಮೂಲಕ ತಲುಪುವವರೆಗೆ ಕಾಯದೆ ಇ ಆವೃತ್ತಿಯಲ್ಲಿ ಓದಬಹುದಾಗಿದೆ. ಸದಸ್ಯತ್ವ ಪಡೆಯುವ ಅವಕಾಶವನ್ನೂ ಒದಗಿಸಲಾಗಿದೆ. ಈ ವೆಬ್ಸೈಟ್ ಮೂಲಕವೇ ಇ ಮತದಾನ ವ್ಯವಸ್ಥೆ ರೂಪಿಸಬೇಕು ಅಂದುಕೊಂಡಿದ್ದೇವೆ. ಇದರಿಂದ ಅಡ್ಡ ಮತದಾನ ತಪ್ಪಿ, ಪಾರದರ್ಶಕ ಚುನಾವಣೆ ಸಾಧ್ಯವಾಗಲಿದೆ. ಲೇಖಕಿಯರು ಈ ವೆಬ್ಸೈಟ್ನ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ, ‘ಕೆಲ ಲೇಖಕಿಯರು ಆರ್ಥಿಕ ನೆರವು ನೀಡಿದ ಪರಿಣಾಮ ವೆಬ್ಸೈಟ್ ವಿನ್ಯಾಸ ಮಾಡಲಾಗಿದೆ. ಇದರಿಂದಾಗಿ ಲೇಖಕಿಯರು ತಾವಿರುವ ಸ್ಥಳದಲ್ಲೇ ಕ್ಷಣ ಮಾತ್ರದಲ್ಲಿ ಸಂಘದ ಮಾಹಿತಿಯನ್ನು ಪಡೆಯಬಹುದಾಗಿದೆ’ ಎಂದು ಹೇಳಿದರು.

ಬೈ–ಲಾ ತಿದ್ದುಪಡಿ: ‘ಸಂಘಕ್ಕೆ ಶಕ್ತಿ ತುಂಬಲು ಬೈ–ಲಾ ತಿದ್ದುಪಡಿ ಅನಿವಾರ್ಯವಾಗಿದೆ. ಈಗಾಗಲೇ ಕರಡು ಸಿದ್ಧವಾಗಿದ್ದು, ತಿದ್ದುಪಡಿಯಿಂದ ಜಿಲ್ಲಾ ಘಟಕಗಳಿಗೆ ಸ್ವಾಯತ್ತತೆ ದೊರೆಯಲಿದೆ. ಸರ್ವ ಸದಸ್ಯರ ಸಭೆಯಲ್ಲಿ ಉದ್ದೇಶಿತ ತಿದ್ದುಪಡಿಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಇದರಿಂದ ಜಿಲ್ಲಾ ಘಟಕಗಳು ಆರ್ಥಿಕವಾಗಿ ಸದೃಢವಾಗಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

‘ಸಂಘದ ಕಟ್ಟಡಕ್ಕಾಗಿ ನಿವೇಶನ ಅಗತ್ಯವಿದ್ದು, ಸರ್ಕಾರಕ್ಕೆ ಈ ಬಗ್ಗೆ ಬೇಡಿಕೆ ಸಲ್ಲಿಸಲಾಗಿದೆ. ಅಕ್ಟೋಬರ್ನಲ್ಲಿ ರಾಜ್ಯಮಟ್ಟದ ಲೇಖಕಿಯರ ಸಮ್ಮೇಳನ ನಡೆಸಲು ನಿರ್ಧರಿಸಿದ್ದೇವೆ’ ಎಂದರು.

ಸಾಹಿತಿ ಎಸ್.ಜಿ. ಸಿದ್ಧರಾಮಯ್ಯ ಅವರು ಲೇಖಕಿಯರಿಗೆ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಲೇಖಕಿಯರಾದ ಸಬಿಹಾ ಭೂಮಿಗೌಡ, ಎನ್. ಗಾಯತ್ರಿ, ಪತ್ರಕರ್ತ ಜಿ.ಎನ್. ಮೋಹನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-43673083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.