ಬೆಂಗಳೂರು: ‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನು ಇತರ ವಿಶ್ವವಿದ್ಯಾಲಯಗಳ ಜತೆಗೆ ವಿಲೀನಗೊಳಿಸುವ ಅಥವಾ ವಿಶ್ವವಿದ್ಯಾಲಯ ಸ್ಥಾನಮಾನ ಹಿಂಪಡೆಯುವ ತೀರ್ಮಾನ ಕೈಗೊಳ್ಳಬಾರದು’ ಎಂದು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಕೆ. ಮರುಳಸಿದ್ದಪ್ಪ, ಜಿ. ರಾಮಕೃಷ್ಣ, ಎಸ್.ಜಿ. ಸಿದ್ಧರಾಮಯ್ಯ, ವಿಜಯಾ, ಜಾಣಗೆರೆ ವೆಂಕಟರಾಮಯ್ಯ, ಕಾ.ತ. ಚಿಕ್ಕಣ್ಣ, ಓ.ಎಲ್. ನಾಗಭೂಷಣಸ್ವಾಮಿ, ಎಚ್.ದಂಡಪ್ಪ, ಡಾ.ವಸುಂಧರಾ ಭೂಪತಿ, ಆರ್. ಪೂರ್ಣಿಮಾ, ಕೆ.ವಿ. ನಾಗರಾಜಮೂರ್ತಿ, ಎಲ್. ಹನುಮಂತಯ್ಯ, ಫಯಾಜ್ ಖಾನ್, ಆರ್. ಸುನಂದಮ್ಮ, ಬಿ.ಟಿ. ಲಲಿತಾನಾಯಕ್, ಸಿ. ಬಸವಲಿಂಗಯ್ಯ ಹಾಗೂ ವಿಮಲಾ ಕೆ.ಎಸ್. ಅವರು ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವು ದಕ್ಷಿಣ ಭಾರತದ ಮೊಟ್ಟ ಮೊದಲ ಮಹಿಳಾ ಕ್ಲಸ್ಟರ್ ವಿಶ್ವವಿದ್ಯಾಲಯವಾಗಿದೆ. ಶತಮಾನದ ಹಿಂದೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದಾರ್ಶನಿಕ ಕಾಣ್ಕೆಯ ಫಲವಾಗಿ ಆರಂಭವಾದ ಈ ಸಂಸ್ಥೆ, ಕರ್ನಾಟಕದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ಕೆಲ ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳುವ ಅಥವಾ ಪುನರ್ ಪರಿಶೀಲಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಸರ್ಕಾರವು ಸಂಪುಟ ಉಪಸಮಿತಿಯೊಂದನ್ನು ರಚಿಸಿದೆ. ಆ ಪಟ್ಟಿಯಲ್ಲಿ ಮಹಾರಾಣಿ ಕ್ಲಸ್ಟರ್ ವಿ.ವಿಯೂ ಇದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ವಿ.ವಿಯನ್ನು ಮುಚ್ಚುವುದು ರಾಜ್ಯ ಸರ್ಕಾರವೇ ಎತ್ತಿ ಹಿಡಿಯುತ್ತಿರುವ, ಬೆಂಬಲಿಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಗೆ ಸ್ಪಷ್ಟ ಹಿನ್ನಡೆ ಯಾಗುತ್ತದೆ. ಸ್ತ್ರೀಪರ ಧೋರಣೆಗಳ ಪ್ರಣಾಳಿಕೆಯಿಂದಲೇ ಅಧಿಕಾರಕ್ಕೆ ಬಂದ ಈ ಸರ್ಕಾರ, ಈಗ ಮಹಿಳಾ ವಿ.ವಿಯ ಅಸ್ತಿತ್ವವನ್ನು ಇತರ ವಿವಿಗಳ ಜತೆಗೆ ವಿಲೀನಗೊಳಿಸುವ ಅಥವಾ ವಿ.ವಿ ಸ್ಥಾನಮಾನ ಹಿಂಪಡೆಯುವ ತೀರ್ಮಾನವು ಮಹಿಳಾ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧದ ನಡೆಯಾಗುತ್ತದೆ’ ಎಂದು ಹೇಳಿದ್ದಾರೆ.

‘ಸ್ನಾತಕೋತ್ತರ ಶಿಕ್ಷಣ ಮುಗಿಸಿದ ನಂತರ ಸಂಶೋಧನೆ ಹಾಗೂ ಇತರ ಉನ್ನತ ಶಿಕ್ಷಣದ ಅವಕಾಶಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಪಡೆಯಲು ಸಾಧ್ಯವಾಗುವುದು ಈ ವಿ.ವಿಯಲ್ಲಿ ಮಾತ್ರ. ಮಹಿಳೆಯರಿಗೇ ವಿಶೇಷವಾದ ಅನೇಕ ಹೊಸ ಕೋರ್ಸ್ಗಳನ್ನು ತೆಗೆಯುವ ಅವಕಾಶಗಳು ಇಲ್ಲಿದ್ದು, ಹೆಣ್ಣು ಮಕ್ಕಳಿಗೆ ಉದ್ಯೋಗಾವಕಾಶ ಒದಗಿಸಿಕೊಡುವ ತರಬೇತಿ ಕೇಂದ್ರಗಳನ್ನು ಇಲ್ಲಿ ಪ್ರಾರಂಭಿಸಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-4-1752032522

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.