ಬೆಂಗಳೂರು: ರಾಜ್ಯದ ವೈದ್ಯಕೀಯ ಕಾಲೇಜುಗಳು ನಿಗದಿಗಿಂತ ಅಧಿಕ ಶುಲ್ಕ ಸಂಗ್ರಹಿಸಿದ್ದರೆ ವಿದ್ಯಾರ್ಥಿಗಳು ದೂರು ನೀಡಬೇಕು ಎಂದು ‘ಪ್ರವೇಶ ಮೇಲ್ವಿಚಾರಣಾ ಸಮಿತಿ’ ಕೋರಿದೆ.

ಸರ್ಕಾರ ಹಾಗೂ ಶಿಕ್ಷಣ ಸಮಸ್ಥೆಗಳ ನಡುವಿನ ಒಪ್ಪಂದದಂತೆ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಖಾತೆಗೆ ಶುಲ್ಕದ ಮೊತ್ತವನ್ನು ಜಮೆ ಮಾಡಿರುತ್ತಾರೆ. ಆ ಮೊತ್ತವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಅಲ್ಲಿಂದ ಆಯಾ ಕಾಲೇಜುಗಳಿಗೆ ವಿತರಣೆ ಮಾಡಲಾಗುತ್ತದೆ. ಆದರೂ, ಕೆಲವು ವೈದ್ಯಕೀಯ ಕಾಲೇಜುಗಳು ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶ ನೀಡುವ ಸಮಯದಲ್ಲಿ ವಿಶ್ವವಿದ್ಯಾಲಯ ಶುಲ್ಕ, ಠೇವಣಿ ಅಥವಾ ಅನುಮತಿಸದ ಇತರೆ ಶುಲ್ಕಗಳನ್ನು ವಸೂಲಿ ಮಾಡುತ್ತಿರುವುದು ಸಮಿತಿಯ ಗಮನಕ್ಕೆ ಬಂದಿದೆ. ಇದು ನಿಯಮ ಬಾಹಿರ ಎಂದು ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಹೇಳಿದ್ದಾರೆ.

ಕಾಲೇಜುಗಳು ಕೆಇಎ ಶುಲ್ಕ ಹೊರತಾಗಿ ₹30,000 ಕೌಶಲ ಪ್ರಯೋಗಾಲಯ ಶುಲ್ಕ ಹಾಗೂ ₹15,000 ಇತರೆ ಶುಲ್ಕಗಳನ್ನು ಮಾತ್ರ ಸಂಗ್ರಹಿಸಲು ಅವಕಾಶವಿದೆ. ಅಧಿಕ ಶುಲ್ಕ ಸಂಗ್ರಹಿಸಿದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿರುವ ಸಮಿತಿಯ ಕಚೇರಿಗೆ ದೂರು ನೀಡಬಹುದು. ದೂರವಾಣಿ ಸಂಖ್ಯೆ 080-23466844 ಅಥವಾ ಇ-ಮೇಲ್: aoc.kea@gmail.com ಸಂಪರ್ಕಿಸಿ ಎಂದು ಮಾಹಿತಿ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-540663063

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.