ಅಕ್ಷರ ದಾಮ್ಲೆ , ಮನಃಶಾಸ್ತ್ರಜ್ಞ

ಬೆಂಗಳೂರಿನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ 13 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು ತಾವೂ ನೇಣಿಗೆ ಶರಣಾದರು. ಸಾಮಾಜಿಕ ಮಾಧ್ಯಮಗಳಲ್ಲಿ ಆ ಅಮ್ಮ– ಮಗಳ ಬಗೆಬಗೆಯ ಭಾವಚಿತ್ರಗಳನ್ನು ನೋಡಿ ನನ್ನ ಮನಸ್ಸು ಕಲಕಿಹೋಯಿತು. ಈಗಷ್ಟೇ ಅರಳುತ್ತಿದ್ದ ಆ ಮಗುವನ್ನು ಕೈಯಾರೆ ಕೊಲ್ಲುವುದಕ್ಕೆ ಆ ತಾಯಿಗೆ ಹೇಗಾದರೂ ಮನಸ್ಸು ಬಂತು? ಗಂಡನಿಗೆ ಹುಷಾರಿರಲಿಲ್ಲ, ಆರ್ಥಿಕ ಸಂಕಷ್ಟವಿತ್ತು, ಹೀಗಾಗಿ ಆಕೆ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತು ಕೇಳಿಬಂತು. ಕಾರಣ ಏನೇ ಇದ್ದರೂ ‘ಕ್ಷಮಯಾ ಧರಿತ್ರಿ’ ಅನ್ನಿಸಿಕೊಳ್ಳುವ ಹೆಣ್ಣುಮಕ್ಕಳು ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಕ್ರೂರವಾಗಿ ವರ್ತಿಸುತ್ತಿರುವುದು ಏಕೆ? ಹೆತ್ತ ಕುಡಿಗಳನ್ನೇ ಕೊಲ್ಲಲು ಮುಂದಾಗುವಷ್ಟು ದೃಢ ನಿರ್ಧಾರ ಮಾಡುವವರು, ಬದುಕುವ ಛಲ ತೋರುವುದಿಲ್ಲವೇಕೆ?ಭಾರತಿ, ಮಂಡ್ಯ

ನಿಮ್ಮ ಪ್ರಶ್ನೆ ಬಹಳ ಮಾರ್ಮಿಕವಾದದ್ದು. ತಾನೇ ಹೆತ್ತ ಮಗುವಿನ ಜೀವವನ್ನು ತನ್ನದೇ ಕೈಯಾರೆ ಹೊಸಕಿ ಹಾಕುವುದಕ್ಕೆ ಆ ತಾಯಿಗೆ ಹೇಗೆ ಮನಸ್ಸಾಗಿರಬಹುದು ಅಂತ ಯೋಚನೆ ಮಾಡಿದರೆ ಆಶ್ಚರ್ಯವೆನಿಸುತ್ತದೆ. ಆದರೆ ಆಕೆಯ ಜೀವನದ ಸಂಘರ್ಷಗಳು ಏನಿದ್ದವು ಎಂಬುದನ್ನು ಅಳೆಯುವುದಕ್ಕೆ ನಮಗೆ ಕಷ್ಟಸಾಧ್ಯ. ಯಾಕೆಂದರೆ ಯಾವಾಗ ಆರೋಗ್ಯದ ಸಮಸ್ಯೆ, ಆರ್ಥಿಕ ಸಂಕಷ್ಟ ಅಥವಾ ಅಸಹಾಯಕತೆ ಇರುತ್ತದೋ ಆಗ ಕೆಲವೊಮ್ಮೆ ಜೀವನ ರೋಸಿ ಹೋಗುತ್ತದೆ. ನೆಂಟರು ಇಷ್ಟರು ಸಹಾಯ ಮಾಡುತ್ತಾರೆ ಅನ್ನುವ ಹಾಗಿದ್ದರೂ ಎಷ್ಟು ಸಮಯ ಸಹಾಯ ಮಾಡುತ್ತಾರೆ ಅನ್ನುವಂಥ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ. ಆಕೆಗೆ ಅಂತಹ ಸಣ್ಣ ಸಹಕಾರವೂ ಅಗತ್ಯ ಸಮಯದಲ್ಲಿ ಸಿಕ್ಕಿತೋ ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ.

ಅನಾರೋಗ್ಯದ ಸಂದರ್ಭದಲ್ಲಿ ಎಷ್ಟೋ ಬಾರಿ ಆಸ್ಪತ್ರೆಗಳಿಗೆ ಹೋಗಿ ಗಂಟೆಗಟ್ಟಲೆ, ದಿನಗಟ್ಟಲೆ ಕಾಯುವಂತಹ ಪರಿಸ್ಥಿತಿ ಇರುತ್ತದೆ. ಖಾಸಗಿ ಆಸ್ಪತ್ರೆಗೆ ಹೋಗುವಂಥ ಪರಿಸ್ಥಿತಿ ಆಕೆಗೆ ಇಲ್ಲದಿದ್ದಿರಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಬಹಳ ಉತ್ತಮ ವೈದ್ಯರು ಇದ್ದರೂ ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ, ಅಲ್ಲಿ ಶುಶ್ರೂಷೆ ಪಡೆದುಕೊಳ್ಳುವುದು ಒಂದು ಹೋರಾಟವೇ ಸರಿ. ಮಾತ್ರವಲ್ಲ ಎಷ್ಟೋ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುವ ಸೌಲಭ್ಯಗಳಿದ್ದರೂ ಅನೇಕ ಕಡೆಗಳಲ್ಲಿ ಬೇರೆ ಬೇರೆ ರೀತಿಯ ಖರ್ಚುಗಳನ್ನು ಮಾಡಬೇಕಾಗುತ್ತದೆ. ಇಲ್ಲವಾದರೆ ಆ ಸೌಲಭ್ಯಗಳು ಲಭ್ಯವಾಗುವುದಿಲ್ಲ.

ಜೀವನದಲ್ಲಿ ಕೆಲವೊಮ್ಮೆ ಹೋರಾಟ ಅನ್ನುವುದು ನಮ್ಮ ಆಯ್ಕೆ ಎಂದಾದಾಗ, ನಮಗೆ ಹೋರಾಟದ ಸೋಲು- ಗೆಲುವಿಗಿಂತ ಹೋರಾಟ ಮಾಡುವ ಪ್ರಕ್ರಿಯೆಯೇ ಮುಖ್ಯವಾಗುತ್ತದೆ. ಆದರೆ ಅದು ಪ್ರಾರಬ್ಧವಾದಾಗ ಎಷ್ಟೋ ಬಾರಿ ಕೈಚೆಲ್ಲುವ ಮನಸ್ಸಾಗುತ್ತದೆ. ಪ್ರಶ್ನೆಯಲ್ಲಿ ಉಲ್ಲೇಖಿಸಿದ ಮಹಿಳೆಯ ಪರಿಸ್ಥಿತಿಯೂ ಅಂತಹದ್ದೇ ಇದ್ದಿರಬಹುದು. ಬಹುಶಃ ತಾನು ಸಾಯುವುದು ಎಂದು ನಿರ್ಧಾರ ಮಾಡಿದ ಮೇಲೆ, ಮಗಳನ್ನು ಉಳಿಸಿ ಹೋದರೆ ಆಕೆಯ ಜೀವನಕ್ಕೆ ಮುಂದೆ ಯಾರು ಗತಿ ಅನ್ನುವಂತಹ ಪ್ರಶ್ನೆ ಆಕೆಗೆ ಇನ್ನೂ ದೊಡ್ಡದಾಗಿ ಕಾಡಿರಬಹುದು.

ಆಕೆ ಮಾಡಿದ್ದು ಸರಿಯೇ ಎಂದರೆ, ಖಂಡಿತವಾಗಿಯೂ ಸರಿಯಲ್ಲ. ಆದರೆ ಜೀವನದ ಸವಾಲುಗಳ ಸನ್ನಿವೇಶವನ್ನು ನೋಡಿದಾಗ, ಆಕೆಯ ಕುರಿತು ಅನುಕಂಪ ಮೂಡುತ್ತದೆ. ಆಕೆಯಂತೆಯೇ ಹೋರಾಟದಲ್ಲಿ ಇರುವಂತಹ ಅನೇಕ ಮಹಿಳೆಯರು ನಮ್ಮ ಸಮಾಜದಲ್ಲಿ ಇದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಸ್ತ್ರೀ ಸಂಘಟನೆಗಳು ಇಂತಹ ಕೈಂಕರ್ಯದಲ್ಲಿ ದೊಡ್ಡ ಕೊಡುಗೆಗಳನ್ನು ಕೊಡುವುದಕ್ಕೆ ಸಾಧ್ಯವಿದೆ. ಯಾರಿಗೆಲ್ಲ ಸಹಾಯ ಬೇಕು ಅಂತಹವರಿಗೆ ಸರಿಯಾದ ಸಮಯಕ್ಕೆ ಸಹಕಾರ ದೊರಕುವಂತೆ ಮಾಡುವ ಪ್ರಯತ್ನ ಸಮಾಜದಲ್ಲಿ ಬಹಳ ದೊಡ್ಡಮಟ್ಟಿಗಿನ ಬದಲಾವಣೆಯನ್ನು ತರುವುದಕ್ಕೆ ನಾಂದಿ ಹಾಡಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1783845570

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.