ಬೆಂಗಳೂರು: ಥಲಸ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿರುವ 12 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಎಚ್ಎಎಲ್ ಪರೀಕ್ಷೆ ಮಾಡಲಾಗುವುದು ಎಂದು ಡಿ.ಕೆ.ಎಂ.ಎಸ್. ಫೌಂಡೇಶನ್ ಇಂಡಿಯಾ ತಿಳಿಸಿದೆ.

ದೇಶದಲ್ಲಿ ಪ್ರತಿವರ್ಷ 10,000ದಿಂದ 15,000 ಮಕ್ಕಳು ಥಲಸ್ಸೇಮಿಯಾ ಕಾಯಿಲೆಯೊಂದಿಗೆ ಜನಿಸುತ್ತಿದ್ದಾರೆ. ಈ ಕಾಯಿಲೆಗೆ ರಕ್ತ ವರ್ಗಾವಣೆಯಷ್ಟೇ ಪರಿಹಾರವಲ್ಲ. ರಕ್ತದ ಕ್ಯಾನ್ಸರ್ ಹಾಗೂ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಕಸಿ ಸಹಾಯಕ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್ ಇಂಡಿಯಾದ ಕಾರ್ಯನಿರ್ವಾಹಕ ಅಧ್ಯಕ್ಷ ಪ್ಯಾಟ್ರಿಕ್ ಪಾಲ್ ಹೇಳಿದರು.

‘ದೇಶದಲ್ಲಿ ದಾನಿಗಳ ಸಂಖ್ಯೆ ಕಡಿಮೆ ಇದೆ. ಆರೋಗ್ಯವಂತ ವ್ಯಕ್ತಿಗಳು ರಕ್ತದ ಆಕರ ಕೋಶ ದಾನ ಮಾಡುವ ಮೂಲಕ ರೋಗಿಗಳ ಚೇತರಿಕೆಗೆ ನೆರವಾಗಬೇಕು. 18–55 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿ ರಕ್ತದ ಆಕರ ಕೋಶದಾನಕ್ಕೆ ನೋಂದಾಯಿಸಿಕೊಳ್ಳಬಹುದು. ವ್ಯಕ್ತಿಯ ಹೆಸರನ್ನು ಗೋಪ್ಯವಾಗಿ ಇಡಲಾಗುವುದು’ ಎಂದರು.

ಡಿಕೆಎಂಎಸ್ ಸಮೂಹದ ಜಾಗತಿಕ ಸಿಇಒ ಡಾ.ಎಲ್ಕೆ ನುಜಾರ್ ಮಾತನಾಡಿ, ‘ಚಿಕಿತ್ಸೆ ಮತ್ತು ವಂಶವಾಹಿ ದೋಷಗಳ ಆಧಾರದ ಮೇಲೆ ಕಾಯಿಲೆಯನ್ನು ಮೈನರ್ ಮತ್ತು ಮೇಜರ್ ಎಂದು ಗುರುತಿಸಲಾಗುತ್ತದೆ. ಈ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗುತ್ತದೆ. ಹಾಗಾಗಿ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ನೆರವು ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಯಾದ ಥಲಸ್ಸೇಮಿಯಾದಿಂದ ಬಳಲುತ್ತಿದ್ದ ಮಹಾರಾಷ್ಟ್ರದ 12 ವರ್ಷದ ಬಾಲಕಿಗೆ ಕೋಲಾರದ 27 ವರ್ಷದ ಯುವಕ ರಕ್ತದ ಆಕರ ಕೋಶ ದಾನ ಮಾಡುವ ಮೂಲಕ ಚೇತರಿಕೆಗೆ ನೆರವಾಗಿದ್ದಾರೆ. ಡಿಕೆಎಂಎಸ್ ಫೌಂಡೇಷನ್ ನೆರವಿನಿಂದ ಈ ಇಬ್ಬರೂ ಮೂರು ವರ್ಷಗಳ ಬಳಿಕ ಗುರುವಾರ ಮುಖಾಮುಖಿಯಾದರು. ಬಾಲಕಿಯ ಚಿಕಿತ್ಸೆಗೆ ಫೌಂಡೇಶನ್ ಆರ್ಥಿಕ ನೆರವು ನೀಡಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-4-501367836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.