ಬೆಂಗಳೂರು: ದೃಷ್ಟಿದೋಷ ಹೊಂದಿದ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ಒದಗಿಸುವ ದಿಸೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇಟ್ಟಿದೆ.

ಜ್ಞಾನಭಾರತಿ ಆವರಣದ ಬ್ರೈಲ್ ಸಂಪನ್ಮೂಲ ಕೇಂದ್ರ, ಬೋಧಿ ಟ್ರೀ ಫೌಂಡೇಷನ್ ಮತ್ತು ಸಿಟಿವಾ ಸಂಸ್ಥೆಯ ಸಹಯೋಗದೊಂದಿಗೆ ಕಿಬೋ ಒಸಿಆರ್ರೀಡರ್ ಕುರಿತ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.

‘ಕಿಬೋ ಒಸಿಆರ್ ರೀಡರ್ ಸಾಧನಮುದ್ರಿತ ಪಠ್ಯಗಳನ್ನು ಧ್ವನಿಯಾಗಿ ಪರಿವರ್ತಿಸುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ದೃಷ್ಟಿದೋಷ ಹೊಂದಿದ ವಿದ್ಯಾರ್ಥಿಗಳು ಇದರ ಮೂಲಕ ಸ್ವತಂತ್ರವಾಗಿ ಅಧ್ಯಯನ ನಡೆಸಲು ಸಹಾಯಕವಾಗುತ್ತದೆ. ಜತೆಗೆ ವಿದ್ಯಾರ್ಥಿಗಳ ಕಲಿಕಾ ಅನುಭವ ಹೆಚ್ಚಾಗುತ್ತದೆ’ ಎಂದು ಬ್ರೈಲ್ ಸಂಪನ್ಮೂಲ ಕೇಂದ್ರದ ಸಂಯೋಜಕ ಎಸ್. ಕುಂಬಿನರಸಯ್ಯ ತಿಳಿಸಿದರು.

‘ಈ ಮೂಲಕ ದೃಷ್ಟಿದೋಷ ಹೊಂದಿದ ವಿದ್ಯಾರ್ಥಿಗಳನ್ನು ಸಬಲ ಗೊಳಿಸಿ ಸಮಾನ ಶಿಕ್ಷಣದ ಅವಕಾಶ ಸೃಷ್ಟಿಸಬಹುದು. ಈ ಸಾಧನ ಬಳಸಲು ತರಬೇತಿ ನೀಡಲಾಗಿದೆ’ ಎಂದರು.

ಕಾರ್ಯಾಗಾರದಲ್ಲಿ ಬೋಧಿ ಟ್ರೀ ಫೌಂಡೇಷನ್ ವತಿಯಿಂದ ಬೆಂಗಳೂರು ವಿ.ವಿ ಬ್ರೈಲ್ ಸಂಪನ್ಮೂಲ ಕೇಂದ್ರಕ್ಕೆ ಕಿಬೋ ಒಸಿಆರ್ ರೀಡರ್ ಸಾಧನವನ್ನು ದೇಣಿಗೆಯಾಗಿ ನೀಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-4-1635459489

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.