ಬೆಂಗಳೂರು: ಹಿರಿಯ ನಾಗರಿಕರ ಸಬಲೀಕರಣ ಸಂಸ್ಥೆ ‘ವಯಹ್ ವಿಕಾಸ್’ನ ಐದನೇ ವಾರ್ಷಿಕೋತ್ಸವ ಜರುಗಿತು.

ವಯಹ್ ವಿಕಾಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಿ, ‘ವಯಹ್ ವಿಕಾಸ್ನಲ್ಲಿ ವಯಸ್ಸಾದವರೂ ಸಕ್ರಿಯವಾಗಿ ಭಾಗವಹಿಸುವ ಅವಕಾಶವಿದೆ’ ಎಂದು ಹೇಳಿದರು.

ಸ್ಥಾಪಕ ಮಂಡಳಿ ಸದಸ್ಯ ಅಲೆಕ್ಸಾಂಡರ್ ಥಾಮಸ್ ಮಾತನಾಡಿ, ‘ವ್ಯವಸ್ಥಿತವಾಗಿ ಹಿರಿಯರ ಆರೈಕೆ, ಈ ಬಗ್ಗೆ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ಹಿರಿಯರ ಪರ ಸ್ಪಂದನೆ ಮತ್ತು ಅದನ್ನು ಸಾಮೂಹಿಕ ಕ್ರಿಯೆಯಾಗಿ ಇಲ್ಲಿ ಮಾಡಲಾಗುತ್ತಿದೆ. ಹಿರಿಯರಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ’ ಎಂದು ವಿವರಿಸಿದರು.

ಮಂಡಳಿಯ ಸದಸ್ಯರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ‘ಲಸಿಕೆ ಮತ್ತು ರೋಗ ತಡೆಗಟ್ಟುವ ಆರೈಕೆಯು ವೃದ್ಧಾಪ್ಯದಲ್ಲಿ ಘನತೆಯಿಂದ ಬದುಕಲು ಮತ್ತು ದೀರ್ಘಾಯುಷ್ಯ ಪಡೆಯಲು ಇರುವ ರಕ್ಷಣಾ ಕವಚ’ ಎಂದು ಬಣ್ಣಿಸಿದರು.

ಟಾಟಾ 1ಎಂಜಿ ಮತ್ತು ಅಸೋಸಿಯೇಷನ್ ಆಫ್ ಹೆಲ್ತ್ಕೇರ್ ಪ್ರೊವೈಡರ್ಸ್ (ಇಂಡಿಯಾ) ಸಹಭಾಗಿತ್ವದಲ್ಲಿ, ರೋಗನಿರೋಧಕಗಳನ್ನು ನೀಡುವ ಜಾಗೃತಿ ಅಭಿಯಾನಕ್ಕೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ನಿವೃತ್ತ ಸರ್ಕಾರಿ ಮತ್ತು ಪಿಂಚಣಿದಾರರ ಸಂಘಗಳು, ನಿವಾಸಿ ಕಲ್ಯಾಣ ಸಂಘಗಳು (ಆರ್ಡಬ್ಲ್ಯುಎ), ಹಿರಿಯ ಆರೈಕೆ ಸೇವಾ ಪೂರೈಕೆದಾರರು, ಆರೋಗ್ಯ ಸಂಸ್ಥೆಗಳು, ರೋಟೇರಿಯನ್ಗಳು, ಲಯನ್ಸ್ ಕ್ಲಬ್ಗಳು ಮತ್ತು ವಯಾ ವಿಕಾಸ್ನ ಪದಾಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-4-1265997750

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.