ಬೆಂಗಳೂರು: ವೆಲೋಕೋಫಿ ವತಿಯಿಂದ ನಾಲ್ಕನೇ ಆವೃತ್ತಿಯ ‘7 ಕಾಫಿ 100 ಮೈಲಿ’ ವಿಶೇಷ ಸೈಕ್ಲಿಂಗ್ ಅಭಿಯಾನ ನಡೆಯುತ್ತಿದ್ದು, ಇದೇ 23ಕ್ಕೆ ಕೊನೆಗೊಳ್ಳಲಿದೆ.

ಈ ಅಭಿಯಾನದಲ್ಲಿ ಭಾಗವಹಿಸಿರುವ ಸೈಕ್ಲಿಸ್ಟ್ಗಳು ಒಟ್ಟು 100 ಮೈಲಿ (ಸುಮಾರು 160 ಕಿ.ಮೀ) ಸೈಕ್ಲಿಂಗ್ ಗುರಿಯನ್ನು ಇಟ್ಟುಕೊಂಡಿದ್ದು, ಪ್ರತಿದಿನ ಸರಾಸರಿ 23 ಕಿ.ಮೀ. ಸವಾರಿ ಮಾಡುವ ಮೂಲಕ ಪೂರ್ಣಗೊಳಿಸಲಿದ್ದಾರೆ. ಪ್ರತಿದಿನ ಬೆಳಿಗ್ಗೆ ನಗರದ ವಿವಿಧ ಪ್ರದೇಶಗಳಲ್ಲಿ ಕಾಫಿ ಕೇಂದ್ರಗಳಲ್ಲಿ ಸೇರುವ ಮೂಲಕ ಸೈಕ್ಲಿಂಗ್ ಸಮುದಾಯವು ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರತಿಯೊಬ್ಬ ಸೈಕ್ಲಿಸ್ಟ್ಗೆ ಉಚಿತ ಕಾಫಿ ನೀಡಲಾಗುತ್ತಿದ್ದು, ಹೊಸಬರೊಂದಿಗೆ ಸ್ನೇಹ, ಹೊಸ ಮಾರ್ಗಗಳು ಹಾಗೂ ಸಮುದಾಯ ಬಂಧವನ್ನು ಈ ಅಭಿಯಾನದ ಮೂಲಕ ಬಲಪಡಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-4-1513637780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.