ಭಾಲ್ಕಿ: ‘ಹಳೇ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸ್ಮರಿಸುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಗುರು-ಶಿಷ್ಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ’ ಎಂದು ಪಿಎಸ್ಐ ರಾಜಕುಮಾರ ಚಾಮಗೊಂಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಜ್ಯಾಂತಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಸಭಾ ಭವನದಲ್ಲಿ 2004-2005ನೇ ಬ್ಯಾಚ್ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಶಿಕ್ಷಕರ ಸನ್ಮಾನ ಮತ್ತು ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಳೇ ವಿದ್ಯಾರ್ಥಿಗಳು ಶಾಲೆಯೊಂದಿಗಿನ ಬಾಂಧವ್ಯವನ್ನು ಉಳಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು’ ಎಂದು ತಿಳಿಸಿದರು.

ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಮೇಶ ಚಾಕುರೆ, ರಾಜಕುಮಾರ ಪಾಟೀಲ್, ರವೀಂದ್ರ ಪಾಟೀಲ, ಉಮಕಾಂತ ಚಾಕುರೆ, ವಿಜಯಕುಮಾರ ಹನಮಶೆಟ್ಟಿ ಸೇರಿದಂತೆ ಹಳೇ ವಿದ್ಯಾರ್ಥಿಗಳಾದ ಸಂಗಮೇಶ ಸೀಗೆ, ಶಿವಕುಮಾರ ಚಿಂಚೋಳೆ, ರಜನಿಕಾಂತ ಕಂಬಾರ, ಸಿದ್ದಲಿಂಗ ಕಂಜೆ, ಶ್ರೀಕಾಂತ ಬಿರಾದಾರ, ಶಿವಮಂಗಲ ಪಾಟೀಲ, ಶ್ರೀಧರ ಚಾರಿ, ಮಹಾದೇವ ಹೊನ್ನಾ, ಮಲ್ಲು ಪೊಲೀಸ್ ಪಾಟೀಲ, ಸಂತೋಷ ನಡುಮನೆ ಸೇರಿ 2004-2005ನೇ ಬ್ಯಾಚ್ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು.

ಸನ್ಮಾನ: ಇದೇವೇಳೆ 2004-2005ನೇ ಬ್ಯಾಚ್ನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸೇರಿ ನಿವೃತ್ತ ಶಿಕ್ಷಕರಾದ ಬಸಯ್ಯ ಸ್ವಾಮಿ, ಸ್ಯಾಮವೇಲ್, ರುಕ್ಮೀಣಿ, ಶೈಲಜಾ, ಮಳಶೆಟ್ಟೆಪ್ಪ ಗಾದಗೆ, ಶಿಂಧೆ, ಕುಮಾರ, ಬಸವರಾಜ ಕಂಗನಕೋಟೆ, ಝೆಡ್ ಬಸವರಾಜ, ಸೋಮನಾಥ ಮುದ್ದಾ, ಶಿವಕುಮಾರ ಸಾಲಿ, ಮನೋಹರ, ಶಶಿಕಾಂತ ಮತ್ತು ನಾಗನ್ನಾಥ ಅವರನ್ನು ಸನ್ಮಾನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-33-3817220

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.