ಭಾಲ್ಕಿ: ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಿಕ್ಷಕ ಬಸವರಾಜ ದಾನ ನೇತೃತ್ವದ ಸ್ವಾಭಿಮಾನಿ ಶಿಕ್ಷಕರ ಪೆನಲ್ನ ನಿರ್ದೇಶಕರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಸಾಮಾನ್ಯ ಕ್ಷೇತ್ರದ 9 ನಿರ್ದೇಶಕರು, ಮಹಿಳಾ ಕ್ಷೇತ್ರದ 4 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ವಾಭಿಮಾನಿ ಶಿಕ್ಷಕರ ಪೆನಲ್ನ ಬಸವರಾಜ ದಾನ, ದತ್ತು ಮುದಾಳೆ, ಸತ್ಯವಾನ ಕಾಂಬಳೆ, ಸುಧಾಕರ ಗಾಯಕವಾಡ, ರಾಮರಾವ್ ಬಾನಾ, ಗಣಪತಿ ಭಕ್ತ ಸೇರಿದಂತೆ 6 ನಿರ್ದೇಶಕರು ಹಾಗೂ ಸ್ವಾಮಿ ವಿವೇಕಾನಂದ ಪೆನಲ್ನ ಸಂತೋಷಕುಮಾರ ವಾಡೆ, ಚಂದ್ರಕಾಂತ ತಳವಾಡೆ, ಸೂರ್ಯಕಾಂತ ಸುಂಟೆ ಸೇರಿದಂತೆ 3 ನಿರ್ದೇಶಕರು ವಿಜಯ ಸಾಧಿಸಿದ್ದಾರೆ.

ಇನ್ನು ಮಹಿಳಾ ಕ್ಷೇತ್ರದಿಂದ ಸ್ವಾಭಿಮಾನಿ ಪೆನಲ್ನ ನಿರ್ಮಲಾ ಚಲವಾ, ಅನಿತಾ ಎಸ್. ಮುಧೋಳೆ ಹಾಗೂ ಸ್ವಾಮಿ ವಿವೇಕಾನಂದ ಪೆನಲ್ನ ರತ್ನಮ್ಮ ಹಾಲಕುಡೆ, ಅನ್ನಪೂರ್ಣ ಮೇತ್ರೆ ನಿರ್ದೇಶಕರಾಗಿ ವಿಜಯ ಸಾಧಿಸಿದ್ದಾರೆ. ಹೀಗಾಗಿ, ಒಟ್ಟು 13 ನಿರ್ದೇಶಕರಿರುವ ಸಂಘದಲ್ಲಿ ಸ್ವಾಭಿಮಾನಿ ಪೆನಲ್ನ 8 ನಿರ್ದೇಶಕರು, ಸ್ವಾಮಿ ವಿವೇಕಾನಂದ ಪ್ಯಾನಲ್ನ 5 ನಿರ್ದೇಶಕರು ವಿಜಯ ಸಾಧಿಸಿದ್ದಾರೆ. ಒಟ್ಟು 13 ನಿರ್ದೇಶಕರ ಸ್ಥಾನಕ್ಕಾಗಿ ಎರಡು ಪೆನಲ್ನ ಅಭ್ಯರ್ಥಿಗಳು ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಸೇರಿ 27 ಜನರು ಕಣದಲ್ಲಿದ್ದರು.

ಸ್ವಾಭಿಮಾನಿ ಶಿಕ್ಷಕರ ಪೆನಲ್ಗೆ ಸ್ಪಷ್ಟ ಬಹುಮತ ದೊರೆತಿದ್ದು, ಮುಂದಿನ ಅಧ್ಯಕ್ಷರಾಗಿ ಬಸವರಾಜ ದಾನಾ ಚುಕ್ಕಾಣಿ ಹಿಡಿಯುವಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಎಲ್ಲ ಶಿಕ್ಷಕ ಬಾಂಧವರ ಅಭಿಮತವಾಗಿದೆ. ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಸ್ವಾಭಿಮಾನಿ ಶಿಕ್ಷಕರ ಪೆನಲ್ನ ಅಭ್ಯರ್ಥಿಗಳು ಚನ್ನಬಸವಾಶ್ರಮ, ಬೌದ್ಧ ಮಂದಿರ, ಭಾಲ್ಕೇಶ್ವರ ಮಂದಿರಗಳಿಗೆ ತೆರಳಿ ದರ್ಶನ ಪಡೆದು ವಿಜಯೋತ್ಸವ ಆಚರಿಸಿದರು.

ಈ ಸಂಧರ್ಭದಲ್ಲಿ ಗೋವಿಂದರಾವ್ ಬಿರಾದಾರ, ದತ್ತಾತ್ರಿ ಕಾಟ್ಕರ್, ಸಂದೀಪ ಉಮಾಜಿ, ಕಾಶಿನಾಥ ಚಲವಾ, ಬಾಲಾಜಿ ಬೈರಾಗಿ ಸೇರಿದಂತೆ ಹಲವು ಪ್ರಮುಖರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-33-1584453058

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.