ಭಾಲ್ಕಿ: ‘ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಶಿಕ್ಷಕರನ್ನು ಗೆಲ್ಲಿಸುವ ಕಾರ್ಯವಾಗಬೇಕು’ ಎಂದು ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂತೋಷ ವಾಡೆ ನೇತೃತ್ವದ ಸ್ವಾಮಿ ವಿವೇಕಾನಂದ ಪೆನಲ್ ಶಿಕ್ಷಕ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ ಮತ್ತು ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಭಾಲ್ಕಿ ತಾಲ್ಲೂಕು ಶೈಕ್ಷಣಿಕವಾಗಿ ಉತ್ತಮ ಮಟ್ಟದಲ್ಲಿದೆ. ಇದಕ್ಕೆ ಇಲ್ಲಿಯ ಶಿಕ್ಷಕರು ಮತ್ತು ಶಿಕ್ಷಕ ಸಂಘಟನೆ ಪದಾಧಿಕಾರಿಗಳು ಕಾರಣರಾಗಿದ್ದಾರೆ. ಪ್ರಗತಿಪರ ಶಿಕ್ಷಕರು ಏಪ್ರಿಲ್ 19ರಂದು ನಡೆಯಲಿರುವ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ, ಕಸಾಪ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ‘ಸ್ವಾಮಿ ವಿವೇಕಾನಂದ ಪೆನಲ್ ಶಿಕ್ಷಕರು ಪ್ರತಿಭಾವಂತರು, ದೂರದೃಷ್ಟಿಯುಳ್ಳವರು ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುವವರಿದ್ದಾರೆ. ಇಂತಹ ಸಂಘಟನೆಯ ಶಿಕ್ಷಕರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಪೆನಲ್ ಮುಖಂಡ ಸಂತೋಷಕುಮಾರ ವಾಡೆ ಮಾತನಾಡಿ, ‘ಸ್ವಾಮಿ ವಿವೇಕಾನಂದ ಪೆನಲ್ನಲ್ಲಿ ಜಾತ್ಯತೀತವಾಗಿ ಎಲ್ಲ ಕೋಮಿನ ಶಿಕ್ಷಕರು ಒಟ್ಟುಗೂಡಿ ಚುನಾವಣೆಗೆ ಸ್ಪರ್ಧಿಸುತ್ತಲಿದ್ದೇವೆ’ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ, ಚುನಾವಣಾ ಅಭ್ಯರ್ಥಿಯೂ ಆದ ಸೂರ್ಯಕಾಂತ ಸುಂಟೆ ಮಾತನಾಡಿ, ‘ಶಿಕ್ಷಕರ ಸದಸ್ಯತ್ವ ಶುಲ್ಕದಲ್ಲಿನ ತಾಲ್ಲೂಕಿನ ವಂತಿಗೆ ಹಣವನ್ನು ಶಿಕ್ಷಕರ ಕಾರ್ಯಗಳಿಗಾಗಿ ಖರ್ಚು ಮಾಡಲಾಗಿದೆ. ಈ ವಿಷಯವಾಗಿ ಪ್ರತಿವರ್ಷ ವಾರ್ಷಿಕ ಸಭೆಯಲ್ಲಿ ಲೆಕ್ಕಪತ್ರ ಕೊಡಲಾಗಿದೆ. ಆದರೆ, ವಿರೋಧಿ ಪೆನಲ್ನವರು ಲೆಕ್ಕಪತ್ರ ಕೊಟ್ಟಿಲ್ಲ ಎಂದು ಆಪಾದಿಸುತ್ತಿರುವುದು ಶಿಕ್ಷಕರಿಗೆ ಮಾಡುವ ದ್ರೋಹವಾಗಿದೆ’ ಎಂದು ಆಕೋಶ ವ್ಯಕ್ತಪಡಿಸಿದರು.

ಅಭ್ಯರ್ಥಿ ನಾಗನಾಥ ಘನ್ನಾಳೆ ಮಾತನಾಡಿದರು. ಪ್ರಮುಖರಾದ ಭಗವಾನ ವಲಾಂಡೆ, ನಿವೃತ್ತ ಶಿಕ್ಷಕ ಕುಡತೆ, ಮಲಗೊಂಡ, ಅಂಬಾದಾಸ ವೈಜೆ, ಭೀಮಣ್ಣ ಕೊಂಕಣೆ, ಚಂದ್ರಕಾಂತ ತಳವಾಡೆ, ದಾವುದ ಜಮಾದಾರ, ಶಿವಕಾಂತ ಬಾಪುರ್ಸೆ, ಅನ್ನಪೂರ್ಣ ಮೇತ್ರೆ, ಆರತಿ ಸೋಲಾಪೂರೆ, ಇಂದುಮತಿ ಕಲ್ಲೂರೆ, ರತ್ನಮ್ಮ ಹಾಲಕೂಡೆ, ಅಶೋಕ ಕುಂಬಾರ ಸೇರಿದಂತೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-33-1977622249

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.