ಭಾಲ್ಕಿ: ‘ಸೈನಿಕರು ಗಡಿ ಕಾಯುವ ಮೂಲಕ ದೇಶದ ರಕ್ಷಣೆ ಮಾಡಿದರೆ, ಶಿಕ್ಷಕರು ದೇಶಕ್ಕೆ ಒಳ್ಳೆಯ ಪ್ರಜೆಗಳನ್ನು ನಿರ್ಮಿಸುವ ಮೂಲಕ ರಾಷ್ಟ್ರಕಟ್ಟುವ ಕಾರ್ಯ ಮಾಡುತ್ತಾರೆ. ಮಕ್ಕಳ ಭವಿಷ್ಯ ನಾವು ಯಾವ ರೀತಿ ರೂಪಿಸುತ್ತೇವೆಯೊ ನಮ್ಮ ದೇಶ ಆ ದಿಸೆಯಲ್ಲಿ ಅಭಿವೃದ್ಧಿಯಾಗುತ್ತದೆ’ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ, ವಚನ ಜಾತ್ರೆ-2026, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ, ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಿದ್ದ 75 ಉತ್ತಮ ಶಿಕ್ಷಕರ ಸನ್ಮಾನ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ದೇಶದ ಭವಿಷ್ಯ ರೂಪಿಸುವವರು ಶಿಕ್ಷಕರಾಗಿದ್ದಾರೆ. ಶಿಕ್ಷಕ ವೃತ್ತಿಯ ಕುರಿತು ನಮ್ಮ ಪೂಜ್ಯರಿಗೆ ಅಪಾರ ಗೌರವವಿದೆ. ಅವರು ನಾನೊಬ್ಬ ಶಿಕ್ಷಕನಾಗಬೇಕೆಂದು ಕನಸು ಕಂಡವರು. ಆದರೆ ಇಂದು ಸಾವಿರಾರು ಶಿಕ್ಷಕರನ್ನು ಆಶ್ರಯ ನೀಡಿ ಲಕ್ಷಾಂತರ ಮಕ್ಕಳಿಗೆ ಸಂಸ್ಕಾರಸಹಿತ ಗುಣಾತ್ಮಕ ಶಿಕ್ಷಣ ನೀಡುವ ಅಕ್ಷರ ಸಂತರಾಗಿದ್ದಾರೆ’ ಎಂದು ತಿಳಿಸಿದರು.

ಮೆಹಕರ್-ತಡೋಳಾ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಮಾತನಾಡಿ, ‘ಶಿಕ್ಷಕರು ಗುರುಸ್ವರೂಪರು. ಅವರ ಮಾರ್ಗದರ್ಶನ ಮಕ್ಕಳ ಭವಿಷ್ಯ ರೂಪಿಸುತ್ತದೆ. ಅದಕ್ಕಾಗಿ ಭಾರತೀಯ ಸಂಸ್ಕೃತಿಯಲ್ಲಿ ಗುರು, ಶಿಕ್ಷಕರಿಗೆ ಅಪಾರ ಗೌರವ ನೀಡಲಾಗಿದೆ. ಭಾಲ್ಕಿಯ ಶ್ರೀಗಳು ನಮ್ಮ ಭಾಗದಲ್ಲಿ ಶೈಕ್ಷಣಿಕ ಸೇವೆ ಮಾಡುವ ಮೂಲಕ ನಮ್ಮ ನಾಡು ಶ್ರೀಮಂತಗೊಳಿಸುತ್ತಿದ್ದಾರೆ. ಪರಮಾತ್ಮ ಅವರಿಗೆ ಶತಾಯುಷಿಗಳಾಗಿ ಮಾಡಲೆಂದು ನಾವೆಲ್ಲರೂ ಪ್ರಾರ್ಥಿಸುತ್ತೇವೆ’ ಎಂದರು.

ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ದಾಕ್ಷಾಯಣಿ ಎಸ್. ಅಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಸ್ವಾಮೀಜಿ, ಚನ್ನಮಲ್ಲ ಸ್ವಾಮೀಜಿ ನೇತೃತ್ವ ವಹಿಸಿಕೊಂಡಿದ್ದರು. ಬಸವರಾಜ ದೇಶಮುಖ, ಅನಿಲ್ ಶಿಂಧೆ, ಉಮಾ ಪ್ರಕಾಶ ಖಂಡ್ರೆ, ಶರದ ಮಹಾರುದ್ರಪ್ಪ ಸಿರ್ಸೆ, ಎಲ್.ಜಿ.ಗುಪ್ತಾ, ಸಂತೋಷ ಖಂಡ್ರೆ, ಸಿದ್ರಾಮಯ್ಯ ಸ್ವಾಮಿ, ಸಂಜುಕುಮಾರ ಜ್ಯಾಂತೆ, ಮಲ್ಲಿಕಾರ್ಜುನ ಹಲ್ಮಂಡಗೆ, ಸೋಮನಾಥ ಮುದ್ದಾ, ರೋಹಿತ ವೈರಾಗೆ, ವಿನೋದ ಜಗತಾಪ, ಮಹೇಶ ಧನ್ನೂರೆ, ಸುಧೀರ ನಾಯಕ, ವಸಂತ ಪಾಟೀಲ, ಕಾಶಿನಾಥ ಚಲ್ವಾ, ಸುಭಾಷ ಹುಲಸೂರೆ, ತಿಪ್ಪಣ್ಣ ಶಿವಪುರೆ ಹಾಜರಿದ್ದರು. ಚಂದ್ರಕಾಂತ ಬಿರಾದಾರ ನಿರೂಪಿಸಿದರು. ಪ್ರೇಮಲತಾ ಶಿವರುದ್ರಯ್ಯ ಸ್ವಾಮಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-33-833799225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.