ಭಾರತೀನಗರ: ದೈಹಿಕ ಆರೋಗ್ಯದ ಮೇಲೆ ಮಾನಸಿಕ ಸ್ವಾಸ್ಥ್ಯ ಅವಲಂಬಿತವಾಗಿದ್ದು, ಜನರು ದೈಹಿಕ ಆರೋಗ್ಯದೆಡೆಗೆ ಗಮನ ಹರಿಸಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥಸ್ವಾಮಿ ತಿಳಿಸಿದರು.

ಇಲ್ಲಿನ ಸ್ಫೂರ್ತಿ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ಹಸಿವು-ಆರೈಕೆ ಹಾಗೂ ಹೆಲ್ತ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬೇಸಿಗೆ ತಾಪಕ್ಕೆ ಚರ್ಮದ ಕಾಯಿಲೆ, ಇತರ ತೊಂದರೆಗಳಿಗಾಗಿ ಜನರು ದೈಹಿಕ ಆರೋಗ್ಯದ ಬಗ್ಗೆ ವೈದ್ಯರ ಸಲಹೆಪಾಲಿಸಬೇಕು ಎಂದು ತಿಳಿಸಿದರು. ಸ್ಪೂರ್ತಿ ಲಯನ್ಸ್ ಸಂಸ್ಥೆ ಪ್ರತಿ ಗುರುವಾರ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ, ಗರ್ಭಿಣಿ, ಬಾಣಂತಿಯರಿಗೆ ಊಟ ನೀಡುವಂತಹ ಮಹಾ ಕಾರ್ಯಕ್ಕೆ ಇಂದು ಚಾಲನೆ ದೊರತಿದೆ ಎಂದು ಶ್ಲಾಘಿಸಿದರು.

ಕಿಮ್ಸ್ ನಿರ್ದೇಶ ವೈದ್ಯ ಡಾ.ಟಿ.ಎಚ್.ಅಂಜನಪ್ಪ ಮಾತನಾಡಿ, ಮನುಸ್ಸಿನ ಆಯಸ್ಸು 120 ವರ್ಷ ನಿಗದಿಗೊಂಡಿದ್ದರೂ ಜನರ ಮನಸ್ಥಿತಿಯಿಂದಾಗಿ ಜೀವಿತಾವಧಿ ಕಡಿಮೆಯಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಚಿಂತನೆ ಮೈಗೂಡಿಸಿಕೊಳ್ಳಬೇಕು. ಎಣ್ಣೆಯಲ್ಲಿ ಕರಿದ ಆಹಾರಗಳಿಂದ ದೂರವಿದ್ದು , ಹಣ್ಣು ತರಕಾರಿ, ಪೌಷ್ಟಿಕ ಆಹಾರಗಳನ್ನು ಸೇವಿಸಬೇಕೆಂದು ಸಲಹೆ ನೀಡಿದರು. ಲಯನ್ಸ್ ಅಧ್ಯಕ್ಷ ಕೆ.ಎಲ್.ಶಿವರಾಮು ಅಧ್ಯಕ್ಷತೆ ವಹಿಸಿದ್ದರು. ಮೊದಲನೇಯ ದಿನ ಹಸಿವು ಆರೈಕೆ ಮೆಣಸಗೆರೆ ಆಲೂರಯ್ಯ ಸೇವಾರ್ಥದಿಂದ ನಡೆಯಿತು. ಆಸ್ಪತ್ರೆಗೆ ಬಂದಿದ್ದ ಎಲ್ಲರಿಗೂ ಹೆಲ್ತ್ ಕಿಟ್ ವಿತರಣೆ ಮಾಡಲಾಯಿತು. ರೋಗಿಗಳಿಗೆ ಆಹಾರ ವಿತರಿಸಲಾಯಿತು.

ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ.ಎಲ್.ರಾಜಶೇಖರ್, ಜಿಲ್ಲಾ ಉಪರಾಜ್ಯಪಾಲ ಸಿದ್ದೇಗೌಡ, ಪ್ರಾಂತೀಯ ಅಧ್ಯಕ್ಷ ಟಿ.ಆರ್.ಸೋಮೇಗೌಡ, ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ಬೋರೇಗೌಡ, ಖಜಾಂಚಿ ಪುಟ್ಟರಾಮ ರಾಜೇ ಅರಸು, ಸಿ.ಚಂದ್ರಶೇಖರ್, ಪತ್ರಿಕಾ ಕಾರ್ಯದರ್ಶಿ ಅಣ್ಣೂರು ಸತೀಶ್, ಸದಸ್ಯರುಗಳಾದ ಸಂದೀಪ್, ಚನ್ನಶೆಟ್ಟಿ, ಬೋರೇಗೌಡ, ದೇವರಾಜು, ರಘು, ವೆಂಕಟೇಶ್, ಬಿದರಹಳ್ಳಿ ಹನುಮಯ್ಯ, ಕೀಲಾರ ಕೃಷ್ಣೆಗೌಡ, ಪಿಡಿಓ ಸುಧಾ, ಇನ್ನರ್ ವಿಲ್ ಸಂಸ್ಥೆಯ ಅಧ್ಯಕ್ಷೆ ಧರಣಿಪುಟ್ಟೇಗೌಡ, ಲೀಲಾರಾಮೇಗೌಡ, ತಾರಾ, ಸೌಭಾಗ್ಯಮ್ಮ, ಸಿದ್ದರಾಮೇಗೌಡ, ದಾಸೇಗೌಡ, ಬೊಮ್ಮನದೊಡ್ಡಿ ಬಸವರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-40-1757611168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.