ಭಟ್ಕಳ: ‘ವಿದ್ಯಾರ್ಥಿಗಳು ಋಣಾತ್ಮಕವಾಗಿ ಚಿಂತಿಸಬಾರದು, ಗುಣಾತ್ಮಕ ಚಿಂತನೆಯೊಂದಿಗೆ ಶ್ರದ್ಧೆಯಿಂದ ಶ್ರಮಿಸಿದರೆ, ಏನನ್ನಾದರೂ ಸಾಧಿಸಬಹುದು’ ಎಂದು ಹೊನ್ನಾವರದ ಮೋಹನ ಕೆ ಶೆಟ್ಟಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿನೋದ ಹೆಗ್ಡೆ ಹೇಳಿದರು.

ಪಟ್ಟಣದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಶುಕ್ರವಾರ ನಡೆದ 2025-26ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳೇ ವಿದ್ಯಾರ್ಥಿ ಬ್ಯಾಂಕ್ ಅಫ್ ಬರೋಡಾ, ಉದ್ಯೋಗಿ ರಜತ ಆಚಾರ್ಯ ಮಾತನಾಡಿ, ‘ವಿದ್ಯಾರ್ಥಿಗಳು ಕೌಶಲ, ಸಂವಹನ ಸಾಮರ್ಥ್ಯವನ್ನು ವೃದ್ಧಿಸಿಕೊಂಡು, ಸತತ ಪ್ರಯತ್ನದ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು’ ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟ'ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಮಾತನಾಡಿ, ‘ಮುಂದಿನ ಶೈಕ್ಷಣಿಕ ವರ್ಷ ಕಾಲೇಜಿನಲ್ಲಿ ಅಕ್ಷ-2026 ರ ಅಡಿಯಲ್ಲಿ ಎ.ಐ ಸರ್ಟಿಫಿಕೇಟ್, ಕೌಶಲ ತರಬೇತಿ, ಸಾಮಾಜಿಕ ಜಾಗೃತಿ ಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಡಾ.ಸುರೇಶ ನಾಯಕ ಮಾತನಾಡಿ, ‘ನಮ್ಮಲ್ಲಿನ ಕ್ಯಾಂಪಸ್ ನೇಮಕಾತಿ ತರಬೇತಿಯಲ್ಲಿ ಶಿಸ್ತಿನಿಂದ ಪಾಲ್ಗೊಳ್ಳುವುದರೊಂದಿಗೆ, ಎಲ್ಲರೂ ಉದ್ಯೋಗವಂತರಾಗಬೇಕು’ ಎಂದು ಹೇಳಿದರು.

ಟ್ರಸ್ಟಿ ರಮೇಶ ಖಾರ್ವಿ ಮಾತನಾಡಿದರು. ಕ್ಯಾಂಪಸ್ ನೇಮಕಾತಿಯ ವಿವರವನ್ನೊಳಗೊಂಡ ಪೋಸ್ಟರ್ನ್ನು ಅನಾವರಣಗೊಳಿಸಲಾಯಿತು. 2025-26ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಶ್ರೀನಾಥ ಪೈ ಎಲ್ಲರನ್ನೂ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-20-1833270592

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.