ಶಹಾಪುರ: ತಾಲ್ಲೂಕಿನ ಭೀಮರಾಯನ ಗುಡಿ ಕೃಷಿ ಮಹಾ ವಿದ್ಯಾಲಯ ರಜತ ಸಂಭ್ರಮದಲ್ಲಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ವೈಜ್ಞಾನಿಕವಾಗಿ ಬೆಳೆ ಪದ್ಧತಿಯ ಅರಿವು ಮೂಡಿಸಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವ ಬೆಳೆ ಬೆಳೆಯುವ ಬಗ್ಗೆ ಜಾಗೃತಿಗೆ ವೇದಿಕೆಯಾಗಿ ರೈತಾಪಿ ವರ್ಗಕ್ಕೆ ಹೊಸ ಭರವಸೆಯ ಆಶಾಕಿರಣವಾಗಿದೆ.

‘2001ರಲ್ಲಿ ಭೀಮರಾಯನಗುಡಿಯ ಕೃಷ್ಣಾ ಭಾಗ್ಯ ಜಲ ನಿಗಮದ(ಕೆಬಿಜೆಎನ್ಎಲ್) ಅಧೀನದಲ್ಲಿ ಕೃಷಿ ಮಹಾ ವಿದ್ಯಾಲಯ ಆರಂಭಗೊಂಡಿತು. ಕಳೆದ 25 ವರ್ಷದಲ್ಲಿ 1,452 ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಡಿಜಿಟಲ್ ಗ್ರಂಥಾಲಯ ಹೊಂದಿದ್ದರ ಫಲವಾಗಿ ಇಲ್ಲಿನ ವಿದ್ಯಾರ್ಥಿಗಳು ಸರ್ಕಾರಿ ಇಲಾಖೆ, ಖಾಸಗಿ ಕಂಪನಿ, ಬ್ಯಾಂಕ್ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಐಸಿಎಆರ್ ಹಾಗೂ ಜಿಆರ್ಎಫ್ ಪರೀಕ್ಷೆಯಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿ ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಹೊರದೇಶಗಳಲ್ಲಿ ಉನ್ನತ ವ್ಯಾಸಂಗ ಅಭ್ಯಾಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಡೀನ್ ಡಾ.ಪ್ರಕಾಶ ಕುಚನೂರ.

‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ 400 ಎಕರೆ ಜಮೀನು ನೀರಾವರಿ ಒಳಗೊಂಡಿದೆ. ಇಲ್ಲೇ ಬೆಳೆಗಳ ಮೇಲೆ ಪ್ರಯೋಗ ನಡೆಸಲಾಗುತ್ತದೆ. 14 ಪ್ರಮುಖ ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಒಣ ಬೇಸಾಯ ಹಾಗೂ ನೀರಾವರಿ, ಸಮಗ್ರ ಕೃಷಿ ಪದ್ಧತಿ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ ಹೆಚ್ಚಿನ ತಾಪಮಾನಕ್ಕೆ ಹೊಂದಿಕೊಳ್ಳುವ ಮೆಕ್ಕೆಜೋಳ ಸಂಶೋಧನೆ ಮಾಡಿ ಬಿಡುಗಡೆ ಮಾಡಿರುವುದು ಗಮನಾರ್ಹ ಸಾಧನೆಯು ಹೌದು. ಹತ್ತಿ, ತೊಗರಿ, ಬೇಸಿಗೆ ಎಳ್ಳು, ತರಕಾರಿ ಹಾಗೂ ಬೀಜ ಉತ್ಪಾದನೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ’ ಎನ್ನುತ್ತಾರೆ ಕುಚನೂರ.

2026-27ರ ಸಾಲಿನಲ್ಲಿ ಬೇಸಾಯ ಶಾಸ್ತ್ರ ಹಾಗೂ ತಳಿ ಅನುವಂಶಿಕತೆ ಮತ್ತು ತಳಿ ಅಭಿವೃದ್ಧಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲು ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಅನುಮೋದನೆ ದೊರಕಿದೆ. ರಜತ ಸಂಭ್ರಮದ ಘಳಿಗೆಯಲ್ಲಿ ಇಲ್ಲಿನ ಭಾಗದ ರೈತರಿಗೆ ಖುಷಿ ನೀಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-30-435766796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.