ಬಿಡದಿ: ಸಮೀಪದ ಅವರೆಗೆರೆ ರಸ್ತೆ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿರುವ ಸೇಂಟ್ ಥಾಮಸ್ ರೆಸಿಡೆನ್ಸಿಯಲ್ ಶಾಲೆಯು ಪ್ರತಿಷ್ಠಿತ ಸಿಬಿಎಸ್ಇ ಸಂಯೋಜನೆ ಪಡೆದಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆಯೋಜಿಸಿದ್ದ ಉದ್ಘಾಟನೆ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

ಸಮಾರಂಭವನ್ನು ಮೋಸ್ಟ್ ರೆವೆರೆಂಡ್ ಡಾ.ಥಿಯೋಡೋಸಿಯಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ,‘ಸೇಂಟ್ ಥಾಮಸ್ ವಸತಿ ಶಾಲೆಯಲ್ಲಿ ಸಿಬಿಎಸ್ಇ ಶಿಕ್ಷಣ ಪದ್ಧತಿ ಅನುಷ್ಠಾನಗೊಳಿಸಿರುವುದು ಹೆಮ್ಮೆಯ ಕ್ಷಣವಾಗಿದೆ’ ಎಂದರು.

ರೈಟ್ ರೆವೆರೆಂಡ್ ಡಾ.ಗ್ರೆಗೋರಿಯೋಸ್ ಮಾತನಾಡಿ,‘ಸೇಂಟ್ ಥಾಮಸ್ ವಸತಿ ಶಾಲೆಯಲ್ಲಿ ಸಿಬಿಎಸ್ಇ ಮಾನ್ಯತೆಯ ಉದ್ಘಾಟನಾ ಸಮಾರಂಭ ಒಂದು ಐತಿಹಾಸಿಕ ಸಾಧನೆ. ಪ್ರಿಮ್ರೋಸ್ ರೋಡ್ ಮಾರ್ತೋಮಾ ಚರ್ಚ್ ಮಾರ್ಗದರ್ಶನದಲ್ಲಿ ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಪೋಷಕರ ನಿಸ್ವಾರ್ಥ ಪರಿಶ್ರಮದಿಂದ ಈ ಕನಸು ನನಸಾಗಿದೆ’ ಎಂದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಗಲ್ ನಟರಾಜ್, ಬಿಡದಿ ಭಾಗದ ಮಧ್ಯಮ ವರ್ಗ ಮತ್ತು ವಲಸೆ ಕಾರ್ಮಿಕರ ಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸೇಂಟ್ ಥಾಮಸ್ ಸಂಸ್ಥೆಯು ಮತ್ತಷ್ಟು ಬೆಳೆಯಲಿ ಮತ್ತು ಶೀಘ್ರದಲ್ಲೇ ಕಾಲೇಜ ಅನ್ನು ಆರಂಭಿಸಲಿ’ ಎಂದು ಹಾರೈಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-14-1111838935

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.